‘ಅರ್ನಾಬ್ – ದ ನ್ಯೂಸ್ ಪ್ರಾಸ್ಟಿಟ್ಯೂಟ್’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ರಾಮ್ ಗೋಪಾಲ್ ವರ್ಮಾ

Prasthutha|

ಮುಂಬೈ : ಕೋವಿಡ್ ಲಾಕ್ ಡೌನ್ ಬಳಿಕ ಸಿನೆಮಾ ಜಗತ್ತು ಸಂಪೂರ್ಣ ಸ್ಥಬ್ಧವಾದಂತಿದೆ. ಚಿತ್ರಮಂದಿರಗಳು ಯಾವಾಗ ಮತ್ತೆ ತೆರೆಯುತ್ತವೆಯೋ ಗೊತ್ತಿಲ್ಲ. ಆದರೆ, ಬಾಲಿವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

ಆದರೆ, ವಿಷಯ ಅದಲ್ಲ, ಈ ಬಾರಿ ರಾಮ್ ಗೋಪಾಲ್ ವರ್ಮಾ ತನ್ನ ಸಿನೆಮಾಕ್ಕೆ ತೆಗೆದುಕೊಂಡಿರುವ ವಿಷಯ ಅತ್ಯಂತ ಕುತೂಹಲಕಾರಿಯಾದುದು. ಬಿಜೆಪಿ ಪರ ಪತ್ರಕರ್ತನೆಂದೇ ಕುಖ್ಯಾತಿ ಪಡೆದಿರುವ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಗ್ಗೆ ಚಿತ್ರ ಮಾಡಲು ಈ ಬಾರಿ ಅವರು ಮುಂದಾಗಿರುವುದೇ ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ. ಅರ್ನಾಬ್ ಗೋಸ್ವಾಮಿ ಬಗ್ಗೆ ಚಿತ್ರ ಮಾಡುತ್ತೇನೆಂದು ಈಗಾಗಲೇ ತಿಳಿಸಿದ್ದ ರಾಮ್ ಗೋಪಾಲ್ ವರ್ಮಾ ಈಗ ಚಿತ್ರದ ಮೊದಲ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಚಿತ್ರಕ್ಕೆ “ಅರ್ನಾಬ್ – ದ ನ್ಯೂಸ್ ಪ್ರಾಸ್ಟಿಟ್ಯೂಟ್’’ ಎಂದು ಹೆಸರಿಡಲಾಗಿದೆ.

- Advertisement -

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಾಬ್ ಬಾಲಿವುಡ್ ಮಂದಿಯನ್ನು ಮನಬಂದಂತೆ ನಿಂದಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು. ಅರ್ನಾಬ್ ಯಾವಾಗಲೂ ಬಳಸುವ ವಾಕ್ಯವೊಂದು ಪೋಸ್ಟರ್ ನಲ್ಲಿ ಬಳಸಿಕೊಳ್ಳಲಾಗಿದೆ. ಪೋಸ್ಟರ್ ನಲ್ಲಿ ನಗ್ನ ಮಹಿಳೆಯೊಬ್ಬರ ಚಿತ್ರವಿದೆ. ಈ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಚಿತ್ರದ ಶೂಟಿಂಗ್ ಯಾವಾಗ ಆರಂಭವಾಗುತ್ತದೆ ಮತ್ತು ಚಿತ್ರ ಬಿಡುಗಡೆಯ ದಿನಾಂಕದ ಬಗ್ಗೆ ವರ್ಮಾ ಇನ್ನು ಮಾಹಿತಿ ನೀಡಿಲ್ಲ.

- Advertisement -