ಅರುಣಾಚಲ ಪ್ರದೇಶ: ಬಿಜೆಪಿ ತೊರೆದ 18 ನಾಯಕರು

0
201

ಇಟಾನಗರ್: ಲೋಕಸಭಾ ಚುನಾವಣಾ ಕಾವೇರುತ್ತಿರುವ ಈ ಸಂದರ್ಭದಲ್ಲಿ ಅರುಣಾಚಲ ಪ್ರದೇಶದ ಇಬ್ಬರು ಸಚಿವರು ಮತ್ತು 6 ಶಾಸಕರನ್ನೊಳಗೊಂಡಂತೆ 18 ಮಂದಿ ಬಿಜೆಪಿಯನ್ನು ತೊರೆದಿದ್ದಾರೆ.

ಪಕ್ಷ ತೊರೆದ ಎಲ್ಲ ನಾಯಕರೂ ಎನ್‌ಪಿಪಿ ಪಕ್ಷವನ್ನು ಸೇರಿದ್ದಾರೆ. ಗಹ ಸಚಿವ ಕುಮಾರ್ ವಾಯೀ, ಪ್ರವಾಸೋದ್ಯಮ ಖಾತೆ ಸಚಿವ ಜರ್ಖರರ್ ಗಮ್ಲಿನ್ ಮತ್ತು ಆರು ಸಚಿವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಇದೇ ಕಾರಣದಿಂದ ಬಿಜೆಪಿ ನಾಯಕರು ಪಕ್ಷವನ್ನು ತೊರೆದಿದ್ದಾರೆ ಎನ್ನಲಾಗಿದೆ.

ಎಲ್ಲ ನಾಯಕರೂ ಎನ್‌ಪಿಪಿ ಪಕ್ಷವನ್ನು ಸೇರಿದ್ದಾರೆ. ರಾಜ್ಯ ಮುಖ್ಯಮಂತ್ರಿ ಪೆಮಾ ಖಂಡು ಅವರಿಗೆ ಮೂರು ಟಿಕೆಟ್ ನೀಡುವ ಮೂಲಕ ಬಿಜೆಪಿ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ದೂರಿದ್ದಾರೆ.

‘‘ನಾವು ಚುನಾವಣೆಗೆ ಸ್ಪರ್ಧಿಸುವುದಲ್ಲದೆ, ರಾಜ್ಯದಲ್ಲಿ ಎನ್‌ಪಿಪಿ ಸರಕಾರವನ್ನು ಸ್ಥಾಪಿಸಲಿದ್ದೇವೆ’’ ಎಂದು ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here