October 21, 2020

ಅಮೆರಿಕ ಚುನಾವಣೆ | ದುರ್ಗಾ ಮಾತೆಯಂತೆ ಕಮಲಾ ಹ್ಯಾರಿಸ್ ಚಿತ್ರ | ಹಿಂದೂಗಳ ಆಕ್ರೋಶ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಉಪಾಧ್ಯಕ್ಷೀಯ ಅಭ್ಯರ್ಥಿ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ದುರ್ಗಾ ಮಾತೆಯ ರೀತಿ ಚಿತ್ರಿಸಿ, ಆ ಚಿತ್ರವನ್ನು ಟ್ವೀಟ್ ಮಾಡಿರುವ ಆಕೆಯ ಸೋದರ ಸಂಬಂಧಿ ಯುವತಿಯ ವಿರುದ್ಧ ಅಮೆರಿಕದ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಜಗತ್ತಿನಾದ್ಯಂತದ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಕಮಲಾ ಹ್ಯಾರಿಸ್ ಸೋದರ ಸಂಬಂಧಿ ಮೀನಾ ಹ್ಯಾರಿಸ್, ಒಂದು ಚಿತ್ರ ಟ್ವೀಟ್ ಮಾಡಿದ್ದರು. ಆ ಚಿತ್ರದಲ್ಲಿ ಕಮಲ ಹ್ಯಾರಿಸ್ ದುರ್ಗಾ ಮಾತೆಯಂತೆ ಬಿಂಬಿಸಲಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಮಹಿಷಾಸುರ ಎಂಬಂತೆ ಮತ್ತು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋಯ್ ಬಿಡೆನ್ ಅವರನ್ನು ದೇವಿಯ ವಾಹನ ಸಿಂಹದಂತೆ ಚಿತ್ರಿಸಲಾಗಿತ್ತು. ಚಿತ್ರದಲ್ಲಿ ಕಮಲಾ ಹ್ಯಾರಿಸ್ ಟ್ರಂಪ್ ರನ್ನು ತ್ರಿಶೂಲದಲ್ಲಿ ಇರಿದು ಹತ್ಯೆ ಮಾಡುವಂತೆ ಬಿಂಬಿಸಲಾಗಿತ್ತು.

ಈಗ ಆ ಟ್ವೀಟ್ ಡಿಲೀಟ್ ಮಾಡಲ್ಪಟ್ಟಿದೆ. ಆದರೆ, ಹಲವಾರು ಮಂದಿ ಟ್ವೀಟ್ ನ ಸ್ಕ್ರೀನ್ ಶಾಟ್ ಬಳಸಿ, ಮೀನಾ ಹ್ಯಾರಿಸ್ ರ ಕೃತ್ಯವನ್ನು ಟೀಕಿಸಿದ್ದಾರೆ.

ಟಾಪ್ ಸುದ್ದಿಗಳು

ವಿಶೇಷ ವರದಿ