January 23, 2021
ಅಮೆರಿಕಾದ ರಕ್ಷಣಾ ಪಡೆಗೆ ಕರಿಯ ವ್ಯಕ್ತಿಯ ನೇತೃತ್ವ : ಇತಿಹಾಸ ಬರೆದ ಬೈಡೆನ್ ಕ್ಯಾಬಿನೆಟ್

ಲಾಯ್ಡ್ ಜೆ. ಆಸ್ಟಿನ್ ಎಂಬ ಕರಿಯ ವ್ಯಕ್ತಿಯನ್ನು ಅಮೇರಿಕಾದ ರಕ್ಷಣಾ ಸಚಿವರಾಗಿ ನೇಮಿಸುವ ಮೂಲಕ ಬೈಡನ್ ಕ್ಯಾಬಿನೆಟ್ ಹೊಸ ಇತಿಹಾಸ ಸೃಷ್ಟಿಸಿದೆ. ಅಮೆರಿಕದ ರಕ್ಷಣಾ ಪಡೆಯನ್ನು ಕರಿಯ ವ್ಯಕ್ತಿಯೊಬ್ಬ ಮುನ್ನಡೆಸುವುದು ಇದೇ ಮೊದಲು. ಜನರಲ್ ಆಸ್ಟಿನ್ ಏಳು ವರ್ಷಗಳಿಂದ ಅಮೇರಿಕಾದ ರಕ್ಷಣಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಇದು ಬಹಳ ಐತಿಹಾಸಿಕ ಮಹತ್ವದ ವಿಷಯವಾಗಿದೆ’ ಎಂದು ಸೆನೆಟರ್ ಜಾಕ್ ರೀಡ್ ಹೇಳಿದ್ದಾರೆ. “ಇದು ಬಹಳ ಪ್ರಾಮುಖ್ಯತೆ ಇರುವ ಕ್ಷಣವಾಗಿದೆ. ಅಮೆರಿಕಾದ ಸಶಸ್ತ್ರ ಪಡೆಗಳ ದೊಡ್ಡ ಭಾಗವು ಆಫ್ರಿಕನ್ ಅಮೇರಿಕನ್ನರು ಮತ್ತು ಲ್ಯಾಟಿನೋಗಳಿಂದ ಕೂಡಿದೆ. ಅವರಲ್ಲೊಬ್ಬರು ಉನ್ನತ ಸ್ಥಾನಕ್ಕೇರುವುದು ಅವರೆಲ್ಲರಿಗೂ ಭರವಸೆಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.