ಅಮೆಜಾನ್ ನ ಹೈದರಾಬಾದ್ ಕ್ಯಾಂಪಸ್ ನಲ್ಲಿ ಇನ್ನೂ 8000 ನೌಕರರ ಹೊಂದುವ ಸಾಮರ್ಥ್ಯ

ಹೈದರಾಬಾದ್ : ಜಗತ್ತಿನಲ್ಲೇ ಅತಿದೊಡ್ಡ ಕ್ಯಾಂಪಸ್ ಆಗಿರುವ ಅಮೆಜಾನ್ ನ ಹೈದರಾಬಾದ್ ಕ್ಯಾಂಪಸ್ ನಲ್ಲಿ ಇನ್ನೂ 8,000 ನೌಕರರನ್ನು ಹೊಂದುವ ಸಾಮರ್ಥ್ಯವಿದೆ ಎಂದು ‘ದ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. ಕಳೆದ ವರ್ಷ ಆರಂಭವಾಗಿರುವ ಈ ಕ್ಯಾಂಪಸ್ ನ 15 ಮಹಡಿಗಳಿರುವ ಕಟ್ಟಡದಲ್ಲಿ, 15,000 ನೌಕರರನ್ನು ಹೊಂದಲು ಅವಕಾಶವಿದೆ. ಈಗ ಅಲ್ಲಿ 7000 ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.

9.7 ಎಕರೆ ವ್ಯಾಪ್ತಿಯಲ್ಲಿ ಹರಡಿರುವ ಹೈದರಾಬಾದ್ ಕ್ಯಾಂಪಸ್ ಆನ್ ಲೈನ್ ವ್ಯವಹಾರ ನಡೆಸುವ ಜಗತ್ತಿನ ಅತಿದೊಡ್ಡ ಸಂಸ್ಥೆ ಅಮೆಜಾನ್ ನ ಜಗತ್ತಿನಲ್ಲೇ ಅತಿದೊಡ್ಡ ಕ್ಯಾಂಪಸ್ ಆಗಿದೆ. ಹೈದರಾಬಾದ್ ಕ್ಯಾಂಪಸ್ ಒಟ್ಟು 68 ಎಕರೆಗಳ ವರೆಗೆ ವಿಸ್ತರಿಸುವ ಅವಕಾಶವಿದೆ. ಕ್ಯಾಂಪಸ್ ಗೆ ತೂಕದ ಲೆಕ್ಕದಲ್ಲಿ ಹೇಳುವುದಾದರೆ, ಐಫೆಲ್ ಟವರ್ ಗಿಂತ ಎರಡೂವರೆ ಪಟ್ಟು ಹೆಚ್ಚು ಉಕ್ಕು ಬಳಸಲಾಗಿದೆ.

- Advertisement -

ಅಮೆಜಾನ್ ವಿರುದ್ಧ ದೇಶದಲ್ಲಿ ಏಳು ಕೋಟಿ ಕಾರ್ಮಿಕರ ಪ್ರತಿನಿಧಿ ಎನಿಸಿರುವ ಅಖಿಲ ಭಾರತ ಕಾರ್ಮಿಕರ ಒಕ್ಕೂಟ ( ಸಿಎಐಟಿ) ಸೇರಿದಂತೆ 40,000 ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬೆಂಗಳೂರಿನಲ್ಲಿ ಅಮೆಜಾನ್ ಫಾರ್ಮಸಿ ಆರಂಭಿಸುವುದಕ್ಕೂ ಸಾಕಷ್ಟು ಟೀಕೆಗಳು ಕೇಳಿಬಂದಿವೆ.

- Advertisement -