ಅಫ್ಘಾನಿಸ್ಥಾನದಲ್ಲಿ ಭೀಕರ ಭೂಕಂಪ : ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ

Prasthutha|

ಕಾಬುಲ್: ಅಫ್ಘಾನಿಸ್ಥಾನ ದೇಶದ ಪೂರ್ವ ಭಾಗದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿನ ಸಂಖ್ಯೆ ಸಾವಿರದ ಗಡಿದಾಟಿದ್ದು, 1500 ರಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಖೋಸ್ಟ್ ಪ್ರಾಂತ್ಯದ ಸ್ಪೆರಾ ಜಿಲ್ಲೆ ಮತ್ತು ಪಕ್ಟಿಕಾ ಪ್ರಾಂತ್ಯದ ಬರ್ಮಲಾ, ಜಿರುಕ್, ನಾಕಾ ಮತ್ತು ಗಯಾನ್ ಜಿಲ್ಲೆಗಳಲ್ಲಿ ಭೂಕಂಪ ಸಂಭವಿಸಿದ್ದು, ಅಪಾರವಾದ ನಷ್ಟವುಂಟಾಗಿದೆ.

ಈ ಭೂಕಂಪನದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. 1,500 ಕ್ಕೂ ಅಧಿಕ ಗಾಯಗೊಂಡಿದ್ದಾರೆ ಎಂದು ಪಕ್ಟಿಕಾ ಪ್ರಾಂತ್ಯದ ಮಾಹಿತಿ ವಿಭಾಗದ ಮುಖ್ಯಸ್ಥ ಅಮೀನ್ ಹುಝೈಫಾ ಮಾಹಿತಿ ಹೊರಹಾಕಿದ್ದಾರೆ.

- Advertisement -

ಭೂಕಂಪ ಸಂಭವಿಸಿದ ತಾಣಗಳಿಗೆ ಹಲವು ಹೆಲಿಕಾಪ್ಟರ್ ಮತ್ತು ರಕ್ಷಣಾ ತಂಡಗಳು ಆಗಮಿಸಿ ರಕ್ಷಣಾ ಕಾರ್ಯ ನಡೆಸಿದೆ.

Join Whatsapp