ಅಪ್ರಾಪ್ತ ಬಾಲಕಿಯ ಮೇಲೆ ನಾಲ್ಕು ವರ್ಷಗಳಿಂದ ಅತ್ಯಾಚಾರ : ಸ್ವಯಂಘೋಷಿತ ದೇವ ಮಾನವನ ಬಂಧನ

Prasthutha|

ವಡೋದರ : ಅಪ್ರಾಪ್ತ ಬಾಲಕಿಯನ್ನು ನಾಲ್ಕು ವರ್ಷಗಳಿಂದ ಅತ್ಯಾಚಾರ ಮಾಡುತ್ತಿದ್ದ ಸ್ವಯಂ ಘೋಷಿತ ದೇವ ಮಾನವನನ್ನು ಬಂಧಿಸಲಾಗಿದೆ. ಬಾಗ್ಲಾ ಮುಖಿ ಬ್ರಹ್ಮಾಸ್ತ್ರ ವಿದ್ಯಾಮಂದಿರ್ ನ ಆಧ್ಯಾತ್ಮಿಕ ಗುರು ಪ್ರಶಾಂತ್ ಉಪಾಧ್ಯಾಯ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ವಂಚನೆ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಉಪಾಧ್ಯಾಯನ ವಿರುದ್ಧ ಇದು ಎರಡನೇ ಅತ್ಯಾಚಾರ ಪ್ರಕರಣ ಇದಾಗಿದೆ.

- Advertisement -

ಗೋತ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ 2015 ಮತ್ತು 2019 ರ ನಡುವೆ ಆಕೆಯ ಮೇಲೆ 12 ಬಾರಿ ಅತ್ಯಾಚಾರ ನಡೆದಿದೆ. ಅತ್ಯಾಚಾರ ನಡೆದ ಸಮಯ ನಾನು ಅಪ್ರಾಪ್ತಳಾಗಿದ್ದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಉಪಾಧ್ಯಾಯನ ಆಧ್ಯಾತ್ಮಿಕ ಪ್ರವಚನ ಕೇಳಲು ಕುಟುಂಬದ ಸದಸ್ಯರು ಆಗಾಗ ಹಾಜರಾಗುತ್ತಿದ್ದರು. ರಜಾದಿನಗಳಲ್ಲಿ ಆಶ್ರಮದಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕುಟುಂಬ ನನಗೆ ತಿಳಿಸಿತ್ತು.

2015ರಲ್ಲಿ ದೂರುದಾರೆ 16 ವರ್ಷದವಳಾಗಿದ್ದಾಗ ಉಪಾಧ್ಯಾಯ ಅವಳನ್ನು ತನ್ನ ಕೋಣೆಗೆ ಕರೆದೊಯ್ದು ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಆಕೆಯ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಹಿಳೆಗೆ ವಂಚನೆ ಮಾಡಿದ ಆರೋಪದಲ್ಲಿ ಉಪಾಧ್ಯಾಯನನ್ನು ಈ ಹಿಂದೆ ಬಂಧಿಸಲಾಗಿತ್ತು. ಇದೀಗ ಗೋತ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಮತ್ತೊಂದು ಅತ್ಯಾಚಾರ ಪ್ರಕರಣವನ್ನೂ ಆತ ಎದುರಿಸುತ್ತಿದ್ದಾನೆ.

- Advertisement -