ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದ 9 ಮಂದಿ ದುರುಳರು

Prasthutha: January 18, 2021

ಮಧ್ಯ ಪ್ರದೇಶದ ಉಮರಿಯಾ ಜಿಲ್ಲೆಯಲ್ಲಿ 13ರ ಹರೆಯದ ಬಾಲಕಿಯೊಬ್ಬಳನ್ನು ಅಪಹರಿಸಿ 9 ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ ವಿಚಾರ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿರುವಂತೆ, ಬಾಲಕಿಯ ತಾಯಿ ಜನವರಿ 14ರಂದು ದೂರು ದಾಖಲಿಸಿದ್ದರು. ಆ ನಂತರ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರ ಶೋಧನೆ ಮುಂದುವರಿದಿದೆ.

ಆಕಾಶ್ ಸಿಂಗ್, ರಾಹುಲ್ ಕುಶ್ವಾಹ, ಪರಾಸ್ ಸೋನಿ, ಮನು ಕೇವತ್, ಓಂಕಾರ್ ರಾಯ್, ಇತೇಂದ್ರ ಸಿಂಗ್, ರಜನೀಶ್ ಚೌಧುರಿ ಮತ್ತು ರೋಹಿತ್ ಯಾದವ್ ಬಂಧಿತ ಆರೋಪಿಗಳು.

ಜನವರಿ 4ರಂದು ಆಕೆಗೆ ಪರಿಚಯವಿರುವ ವ್ಯಕ್ತಿಯೊಬ್ಬ ಆಕೆಯನ್ನು ಪುಸಲಾಯಿಸಿ ಮಾರ್ಕೆಟ್ ನಿಂದ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದಿದ್ದ. ನಂತರ ಆಕೆಯ ಮೇಲೆ ಇತರ ಆರು ಮಂದಿ ಸೇರಿಕೊಂಡು ಆಕೆಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಜನವರಿ ಐದರಂದು ಬಿಡುಗಡೆಗೊಳಿಸಿದ್ದರು ಎಂದು ಹೇಳಲಾಗಿದೆ. ಅಧಿಕಾರಿಗಳು ತಿಳಿಸಿರುವಂತೆ, ಈ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಬೆದರಿಸಿದ್ದರು. ಇದರಿಂದ ಭೀತಿಗೊಳಗಾಗಿದ್ದ ಆಕೆ ದೂರು ದಾಖಲಿಸಿರಲಿಲ್ಲ.

ಸಂತ್ರಸ್ತ ಬಾಲಕಿಯನ್ನು ಜನವರಿ 11ರಂದು ಇವರ ಪೈಕಿ ಓರ್ವ ಆರೋಪಿ ಆಕೆಯನ್ನು ಅಪಹರಿಸಿದ್ದ. ನಂತರ ಆಕೆಯನ್ನು ಮತ್ತೆ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಕಳೆದ ಬಾರಿ ಮೂವರು ಆರೋಪಿಗಳು ಮತ್ತು ಇಬ್ಬರು ಅಪರಿಚಿತ ಟ್ರಕ್ ಚಾಲಕರು ಸೇರಿದಂತೆ ಐವರು ಆ ದಿನ ಮತ್ತು ಜನವರಿ 12ರಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಹೇಳಲಾಗಿದೆ.

ಈ ಮಧ್ಯೆ ಬಾಲಕಿಯ ಮನೆಮಂದಿ ಜನವರಿ 11ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ನಂತರ ಬಾಲಕಿ ಆ ದುರುಳರಿಂದ ತಪ್ಪಿಸಿಕೊಂಡು ಹೇಗೋ ಮನೆ ಸೇರಿದ್ದಳು. ಆ ಬಳಿಕ ಆಕೆಯ ತಾಯಿ ಜನವರಿ 14ರಂದು ದೂರು ನೀಡಿ, ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿದ್ದರು.

ಈ ಸಂಬಂಧ ಕೊತಾವಲಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ, 376(ಅತ್ಯಾಚಾರ), 366 ಸಹಿತ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!