ಅಪಾರ ಜನಸ್ತೋಮದ ನಡುವೆ ಕೆ.ಎಂ.ಶರೀಫ್ ರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ

Prasthutha|

ಅಪಾರ‌ ಜನಸ್ತೋಮದ ಮಧ್ಯೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ನಾಯಕ ಕೆ.ಎಂ.ಶರೀಫ್‌ರವರ ದಫನ ಕಾರ್ಯವನ್ನು ಮಿತ್ತಬೈಲ್ ಜುಮಾ ಮಸ್ಜಿದ್ ನ ದಫನ ಭೂಮಿಯಲ್ಲಿ ರಾತ್ರಿ ಸುಮಾರು 10:15ರ ವೇಳೆ ನೆರವೇರಿಸಲಾಯಿತು.

ಮಂಗಳೂರು ಹೊರ ವಲಯದ ಬಿ.ಸಿ.ರೋಡ್ ಮಿತ್ತಬೈಲ್ ನ ಮಸೀದಿಯಲ್ಲಿ ಸಂಜೆ 5:30ರಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು 10:55 ಗಂಟೆಯ ವರೆಗೂ ಸಾರ್ವಜನಿಕರ ದಂಡು ಹರಿದು ಬರುತ್ತಲೇ ಇತ್ತು. ಪ್ರತ್ಯೇಕ ಪ್ರತ್ಯೇಕವಾಗಿ ಜನಾಝ ನಮಾಝ್‌ ನಿರ್ವಹಿಸಲಾಗುತ್ತಿದ್ದು, ಪ್ರಮುಖ ಧಾರ್ಮಿಕ ನಾಯಕರು ಅದಕ್ಕೆ ನೇತೃತ್ವ ನೀಡಿದರು.

- Advertisement -

ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಚೆಯರ್ ಮೆನ್ ಒ.ಎಂ.ಎ.ಸಲಾಂ ಅವರು, ಕೆ.ಎಂ.ಶರೀಫ್ ರವರ ಆದರ್ಶ ಬದುಕಿನ ಕುರಿತು ವಿಚಾರಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್, ಕಾರ್ಯದರ್ಶಿ ಮುಹಮ್ಮದ್ ಸಾಕಿಫ್, ಸಮಿತಿ ಸದಸ್ಯರಾದ ಮುಹಮ್ಮದ್ ಅಲಿ ಜಿನ್ನಾ ತಮಿಳುನಾಡು, ಅಫ್ಸರ್ ಪಾಶ ಬೆಂಗಳೂರು, ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ಎಸ್.ಡಿ.ಪಿ.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಜೀದ್ ಕೊಡ್ಲಿಪೇಟೆ, ಮಾಜಿ ಸಚಿವರಾದ ರಮಾನಾಥ್ ರೈ, ಯುಟಿ ಖಾದರ್, ಮಾಜಿ ಶಾಸಕ ಮೈದಿನ್ ಬಾವಾ, ಕೆಪಿಸಿಸಿ ಸದಸ್ಯ ಅಶ್ವಿನ್ ಕುಮಾರ್, ಎಸ್ಕೆಎಸ್ಸೆಸ್ಸೆಫ್ ಮುಖಂಡ ಹುಸೈನ್ ದಾರಿಮಿ ರೆಂಜಲಾಡಿ, ಉದ್ಯಮಿ ನೌಶಾದ್ ಸುರಲ್ಪಾಡಿ, ಬೋಳಂಗಡಿ ಹವ್ವಾ ಮಸ್ಜಿದ್ ಖತೀಬ್ ಯಹ್ಯಾ ತಂಙಳ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ಕಲೀಮುಲ್ಲಾ ರಶಾದಿ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮುಹಮ್ಮದ್, ಮಿತ್ತಬೈಲ್ ಮುದರ್ರಿಸ್ ಉಮರುಲ್ ಫಾರೂಕ್ ಫೈಝಿ, ಖತೀಬ್ ಅಶ್ರಫ್ ಫೈಝಿ, ಸೈಯ್ಯದ್ ಇಬ್ರಾಹೀಂ ಅಲ್ ಹಾದಿ ತಂಙಳ್, ಆತೂರ್ ತಂಙಳ್, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ತಬೂಕ್ ದಾರಿಮಿ, ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ.ಅಶ್ರಫ್ ಪರ್ಲಿಯಾ ಮಸ್ಜಿದ್ ಖತೀಬ್ ಅಶ್ಫಕ್ ಫೈಝಿ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ, ಸಿ.ಟಿ.ಸುಲೈಮಾನ್ ಕಾಸರಗೋಡು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಯೂಸುಫ್ ಮಿಸ್ಬಾಹಿ, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ, ಪುರಸಭಾ ಸದಸ್ಯ ಮುಹಮ್ಮದ್ ಲುಕ್ಮಾನ್, ಪುರಸಭಾ ಅದ್ಯಕ್ಷ ಮುಹಮ್ಮದ್ ಶರೀಫ್, ಸದಸ್ಯರಾದ ಇದ್ರೀಸ್ ಪಿ.ಜೆ., ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಸಮಿತಿ ಸದಸ್ಯ ಆನಂದ್ ಮಿತ್ತಬೈಲ್, ಯುನಿವೆಫ್ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ ಮತ್ತಿತರ ಗಣ್ಯರು, ಅಪಾರ ಅಭಿಮಾನಿಗಳು ಮೃತರ ಅಂತಿಮ ದರ್ಶನವನ್ನು ಪಡೆದರು.

- Advertisement -