Home ಟಾಪ್ ಸುದ್ದಿಗಳು ಅನಿಮೇಟೆಡ್‌ ವಿಡಿಯೊ ಪ್ರಕರಣ: ನಡ್ಡಾ–ಮಾಳವೀಯ ವಿರುದ್ಧದ ಪ್ರಕರಣ ರದ್ದು

ಅನಿಮೇಟೆಡ್‌ ವಿಡಿಯೊ ಪ್ರಕರಣ: ನಡ್ಡಾ–ಮಾಳವೀಯ ವಿರುದ್ಧದ ಪ್ರಕರಣ ರದ್ದು

ಬೆಂಗಳೂರು: ಬಿಜೆಪಿಯ ಅಧಿಕೃತ ಸಾಮಾಜಿಕ ಖಾತೆಯಲ್ಲಿ ಪ್ರಸಾರ ಮಾಡಲಾಗಿದ್ದ ಅನಿಮೇಟೆಡ್‌ ವಿಡಿಯೊವೊಂದನ್ನು ಆಕ್ಷೇಪಿಸಿ ಕೇಂದ್ರ ಸಚಿವ ಜೆ.ಪಿ.ನಡ್ಡಾ ಮತ್ತು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವಿಯಾ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಈ ಸಂಬಂಧ ಜೆ.ಪಿ. ನಡ್ಡಾ ಮತ್ತು ಅಮಿತ್‌ ಮಾಳವಿಯಾ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಪುರಸ್ಕರಿಸಿದ್ದಾರೆ.

ನಡ್ಡಾ ಮತ್ತು ಮಾಳವೀಯ ಪರ ಹೈಕೋರ್ಟ್‌ ವಕೀಲ ಬಿ.ವಿನೋದ್ ಕುಮಾರ್ ಮತ್ತು ಪ್ರಾಸಿಕ್ಯೂಷನ್‌ ಪರ ರಾಜ್ಯದ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್.ಜಗದೀಶ್‌ ವಾದ ಮಂಡಿಸಿದ್ದರು.

Join Whatsapp
Exit mobile version