ಅತ್ಯಾಚಾರ ಆರೋಪಿಯ ಶಿರಚ್ಛೇದ

Prasthutha|

ಲಕ್ನೋ : ನಿರಂತರ ಮಹಿಳೆಯರ ಮೇಲಿನ ದೌರ್ಜನ್ಯದಿಂದ ಕುಖ್ಯಾತಿ ಪಡೆದಿರುವ ಯೋಗಿ ಆದಿತ್ಯನಾಥ್ ಆಳ್ವಿಕೆ ನಡೆಸುತ್ತಿರುವ ಉತ್ತರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಶಿರಚ್ಛೇದ ಮಾಡಲಾಗಿದೆ. ಪಿಲಿಭಿತ್ ಬಳಿಯ ಹಳ್ಳಿಯೊಂದರ 22 ವರ್ಷದ ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ರಾಮ್ ಕೋಟ್ ಮೂಲದ 25ವರ್ಷದ ಅನೂಪ್ ಕಶ್ಯಪ್ ನನ್ನು ಶಿರಚ್ಛೇದ ಮಾಡಲಾಗಿದೆ. ಪಲಿಭಿತ್ ಹುಲಿ ಸಂರಕ್ಷಣಾ ಕೇಂದ್ರದ ಬಳಿಯ ಭಾರಾಹಿ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದೆ.

- Advertisement -

ಕಟ್ಟಿಗೆ ಸಂಗ್ರಹಿಸಲು ಅರಣ್ಯಕ್ಕೆ ಹೋದ ಜನರಿಗೆ ಅನೂಪ್ ನ ಶವ ಪತ್ತೆಯಾಗಿದೆ. ಮೃತದೇಹವು ಕೊಳೆತು ಬಹುತೇಕ ಅಸ್ಥಿಪಂಜರವಾಗಿತ್ತು. ಅತ್ಯಾಚಾರ ನಡೆಸಿದ ನಂತರ ನಾಪತ್ತೆಯಾಗಿದ್ದ ಈತನನ್ನು ಪೊಲೀಸರು ಹುಡುಕಾಟದಲ್ಲಿರುವಾಗಲೇ ಅನೂಪ್ ನ ದೇಹ ಶಿರಚ್ಛೇದ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕೊಲೆಯ ಹಿಂದೆ ಯುವತಿಯ ಕುಟುಂಬದ ಕೈವಾಡವಿದೆ ಎಂದು ಅನೂಪ್ ನ ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -