November 10, 2020

ಹರಿಯಾಣ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಒಲಿಂಪಿಕ್ ಕುಸ್ತಿ ಪಟು ಯೋಗೀಶ್ವರ್ ದತ್ ಗೆ ಸೋಲು: ಕಾಂಗ್ರೆಸ್ ಜಯಭೇರಿ

ಚಂಡೀಘಡ್: ಬಿಜೆಪಿ ಅಭ್ಯರ್ಥಿ ಯೋಗೇಶ್ವರ್ ದತ್ ಹರಿಯಾಣದ ಬರೋಡಾ ವಿಧಾನಸಭಾಕ್ಷೇತ್ರದ ಉಪಚುನಾವಣೆಯಲ್ಲಿ ಎರಡನೆ ಬಾರಿ ಸೋಲನುಭವಿಸಿದ್ದಾರೆ. ಅವರ ಎದುರಾಳಿ ಕಾಂಗ್ರೆಸ್ ನ ರಾಜ್ ನರ್ವಾಲ್ 10000 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಈ ವಿಧಾನಸಭಾ ಕ್ಷೇತ್ರದಲ್ಲಿ ಎರಡನೆ ಬಾರಿಗೆ ಒಲಿಂಪಿಕ್ ಕುಸ್ತಿ ಪಟು ಯೋಗೇಶ್ವರ್ ದತ್ ಸೋಲನುಭವಿಸಿದ್ದಾರೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ 4800 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕೃಷಣ್ ಹೂಡಾ ವಿರುದ್ಧ ಸೋಲನುಭವಿಸಿದ್ದರು.

ಕೃಷಣ್ ಹೂಡ ಅವರ ನಿಧನದೊಂದಿಗೆ ಬರೋಡಾ ಅಸೆಂಬ್ಲಿ ಸ್ಥಾನವು ತೆರವಾಗಿತ್ತು.

ಟಾಪ್ ಸುದ್ದಿಗಳು