ಅಜ್ಮಾನ್: ಸರ್ಕಾರಿ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಸೌಲಭ್ಯ

Prasthutha|

ಅಜ್ಮಾನ್‌ನಲ್ಲಿ ಸರ್ಕಾರಿ ನೌಕರರಿಗಾಗಿ ಹೊಸ ವರ್ಕ್‌ ಫ್ರಮ್ ಹೋಮ್(ಮನೆಯಿಂದಲೇ ಕೆಲಸ ನಿರ್ವಹಣೆ) ಯೋಜನೆಯನ್ನು ಘೋಷಿಸಲಾಗಿದೆ.

- Advertisement -

ಆಡಳಿತ ಮತ್ತು ಹಣಕಾಸು ವ್ಯವಹಾರಗಳ ಅಜ್ಮಾನ್‌ನ ದೊರೆ ಶೇಖ್ ಅಹ್ಮದ್ ಬಿನ್ ಹುಮೈದ್ ಅಲ್ ನುಐಮೀ ಈ ನೂತನ ನೀತಿಯನ್ನು ಬಿಡುಗಡೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭಾಗಶಃ ಮತ್ತು ಪೂರ್ಣಾವಧಿಯ ವರ್ಕ್‌ ಫ್ರಮ್ ಹೋಮ್ ಕಾರ್ಯನಿರ್ವಹಣೆಯ ನಿರ್ದೇಶನವು ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಅನ್ವಯಿಸುತ್ತದೆ.

- Advertisement -

ಕೆಲವು ಉದ್ಯೋಗಿಗಳು ಪೂರ್ಣಾವಧಿಯ ಸೇವೆಯನ್ನು ಮನೆಯಲ್ಲೇ ಕುಳಿತು ಮಾಡಬಹುದು. ಅಲ್ಲದೇ, ಇತರರು ಭಾಗಶಃ ವರ್ಕ್‌ ಫ್ರಮ್ ಹೋಮ್ ಕೆಲಸದ ವೇಳಾಪಟ್ಟಿಯನ್ನು ಆರಿಸಿಕೊಳ್ಳಬಹುದು. ಇದು ದೈನಂದಿನ, ಸಾಪ್ತಾಹಿಕ ಅಥವಾ ಮಾಸಿಕ ಸೇವಾವಧಿಯ ಆಧಾರದ ಮೇಲೆ ಕಛೇರಿಗಳಲ್ಲಿ ಉದ್ಯೋಗಿಗಳ ಉಪಸ್ಥಿತಿಯನ್ನು ನಿರ್ಧರಿಸುತ್ತದೆ. ಆದರೆ, ಪ್ರೊಬೆಶನರಿ ನೌಕರರು ಮತ್ತು ಕಚೇರಿಗಳಲ್ಲಿ ಹಾಜರಾಗಬೇಕಾದವರಿಗೆ ಈ ನೀತಿಯು ಅನ್ವಯಿಸುವುದಿಲ್ಲ.

ಕಳೆದ ತಿಂಗಳು, ದುಬೈ ಮತ್ತು ಅಬುಧಾಬಿ ಸರ್ಕಾರಿ ನೌಕರರಿಗೆ ಅವರ ಮಕ್ಕಳು ಇ- ಶಿಕ್ಷಣ ವ್ಯವಸ್ಥೆಗೆ ದಾಖಲಾಗಿದ್ದ ಸನ್ನಿವೇಶದಲ್ಲಿ ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಲಾಗಿತ್ತು.

Join Whatsapp