ಕೊರೊನ ಪರಿಹಾರವಾಗಿ ಒಂದೂವರೆ ಲಕ್ಷ ರೂ. ಬಂದಿದೆ ಎಂದು ಮಹಿಳೆಯ ಚಿನ್ನ ದೋಚಿದ ಅಪರಿಚಿತ!

Prasthutha|

ಬಂಟ್ವಾಳ : ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ನಿಮಗೆ ಕೊರೊನದ ಹಣ ಬಂದಿದೆ ಎಂದು ನಂಬಿಸಿ, ಅವರ ಚಿನ್ನ ಪಡೆದು ಪರಾರಿಯಾದ ಬಗ್ಗೆ ವರದಿಯಾಗಿದೆ. ಬಿಸಿರೋಡ್ ಮಿನಿ ವಿಧಾನಸೌಧ ಆವರಣದಲ್ಲೇ ಈ ಘಟನೆ ನಡೆದಿದ್ದು, ಆರೋಪಿಯ ಪತ್ತೆಗಾಗಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

- Advertisement -

 ಅಮ್ಟಾಡಿ ತಲೆಂಬಿಲ ನಿವಾಸಿ ಮಹಿಳೆಯೊಬ್ಬರು ಬಿ.ಸಿ. ರೋಡಿನ ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಬಿಲ್ ಪಾವತಿಸಿ ವಾಪಾಸ್ ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಅವರ ಬಳಿ ಬಂದು, ತಾನು ಶೀನಪ್ಪ ಎಂಬವರ ಮಗ ಸಂತೋಷ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆತ ನಿಮಗೆ ಕೊರೊನ ಪರಿಹಾರವಾಗಿ ಒಂದೂವರೆ ಲಕ್ಷ ರೂ. ಹಣ ಬಂದಿದೆ ಎಂದು ನಂಬಿಸಿದ್ದಾನೆ.

ಅರ್ಜಿ ಸಲ್ಲಿಸಲೆಂದು ಮಹಿಳೆಯನ್ನು ಮಿನಿವಿಧಾನಸೌಧಕ್ಕೆ ಕರೆದೊಯ್ದ ದುಷ್ಕರ್ಮಿಯು, ಅರ್ಜಿ ಸಲ್ಲಿಸಲು ಹತ್ತು ಸಾವಿರ ರೂ. ಹಣಬೇಕೆಂದು ಹೇಳಿದ್ದ. ತಮ್ಮಲ್ಲಿ ಹಣ ಇಲ್ಲವೆಂದಾಗ, ನಿಮ್ಮ ಮಗನಲ್ಲಿ ಕೇಳಿದ್ದೆ, ಆತ ನಿಮ್ಮ ಚಿನ್ನ ಪಡೆದು ಹಣ ಹೊಂದಿಸಲು ತಿಳಿಸಿದ್ದಾನೆ ಎಂದು ಶಂಕಿತ ವ್ಯಕ್ತಿ ಹೇಳಿದುದಾಗಿ ವರದಿಯಾಗಿದೆ.

- Advertisement -

ಆದರೆ, ಚಿನ್ನ ಪಡೆದು ತೆರಳಿದ ವ್ಯಕ್ತಿ ತುಂಬಾ ಹೊತ್ತಾದರೂ ಮರಳಿ ಬಾರದೆ ಇದ್ದಾಗ, ಸಂದೇಹಗೊಂಡು ಮಹಿಳೆಯು ಬೇರೆಯವರ ಸಹಾಯದಿಂದ ಮಗನಿಗೆ ಫೋನ್ ಮಾಡಿದಾಗ, ತಾನು ಮೋಸ ಹೋಗಿರುವುದು ತಿಳಿಯಿತು. ಆ ನಂತರ ಸ್ಥಳಕ್ಕೆ ಧಾವಿಸಿ ಬಂದ ಮಹಿಳೆಯ ಮಗ ತಾಯಿಯನ್ನು ಬಂಟ್ವಾಳ ನಗರ ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದಾರೆ.   

Join Whatsapp