November 10, 2020

ಡ್ರಗ್ ಮಾಫಿಯಾ ಗ್ಯಾಂಗ್ ನಿಂದ ಟಿವಿ ಪತ್ರಕರ್ತನ ಹತ್ಯೆ

ಚೆನ್ನೈ : ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಟಿವಿ ಪತ್ರಕರ್ತರೊಬ್ಬರನ್ನು ಡ್ರಗ್ಸ್ ಡೀಲರ್ ಗಳ ಗ್ಯಾಂಗ್ ಒಂದು ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಡ್ರಗ್ಸ್ ವ್ಯವಹಾರಕ್ಕೆ ಸಂಬಂಧಿಸಿ ವರದಿಗಾರನು ಪೊಲೀಸರಿಗೆ ಮಾಹಿತಿ ನೀಡುತ್ತಿರುವ ಶಂಕೆಯಲ್ಲಿ ಈ ಹತ್ಯೆ ನಡೆದಿದೆ ಎನ್ನಲಾಗಿದೆ.

ಕುದ್ರತೂರ್ ನಲ್ಲಿ ಘಟನೆ ನಡೆದಿದೆ. ಪುದು ನೆಲ್ಲೂರು ಗ್ರಾಮದ ನಿವಾಸಿಯಾದ 27ರ ಹರೆಯದ ಇಸ್ರಾವೆಲ್ ಮೋಸಸ್ ಎಂಬವರು ಹತ್ಯೆಗೊಳಗಾದವರು.
ಪ್ರಕರಣದ ಆರೋಪಿಗಳು ಡ್ರಗ್ಸ್ ಮಾರಾಟ ಮತ್ತು ಒತ್ತುವರಿಸಲ್ಪಟ್ಟ ಭೂಮಿ ಮಾರಾಟದಂತಹ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೋಸಸ್ ಯಾವುದೇ ವರದಿ ಮಾಡಿರಲಿಲ್ಲ.  

ಟಾಪ್ ಸುದ್ದಿಗಳು