FACT CHECK | ಬಿಹಾರ ಚುನಾವಣೆ | ತೇಜಸ್ವಿ ಯಾದವ್ ಸಭೆಯಲ್ಲಿ ಭಾಗವಹಿಸಿದ್ದವರು ಬಿಜೆಪಿಗೆ ವೋಟು ಹಾಕುತ್ತೇವೆ ಎಂದಿದ್ದು ನಿಜವೇ?

Prasthutha|

ನವದೆಹಲಿ : ನಿನ್ನೆ (ಅ.30ರಂದು) ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿ ಪ್ರೀತಿ ಗಾಂಧಿ ಎಬಿಪಿ ನ್ಯೂಸ್ ಸುದ್ದಿಸಂಸ್ಥೆಯಲ್ಲಿ ಪ್ರಸಾರವಾದ ವೀಡಿಯೊವೊಂದನ್ನು ಶೇರ್ ಮಾಡಿದ್ದರು.

- Advertisement -

ಬಿಹಾರದಲ್ಲಿ ತೇಜಸ್ವಿ ಯಾದವ್ ಅವರ ಸಮಾವೇಶಗಳಿಗೆ ಹೋಗುತ್ತಿರುವ ಜನರಿಗೆ ವಿಶೇಷವಾಗಿ ಈ ವೀಡಿಯೊ. ಅಷ್ಟೊಂದು ಜನ ಕೇವಲ ಮನರಂಜನೆಯ ಉದ್ದೇಶದಿಂದ ಮಾತ್ರ ಅಲ್ಲಿ ಸೇರಿದೆ. ಅವರಿಗೆ, ತಮ್ಮ ವೋಟು ಪ್ರಧಾನಿ ಮೋದಿಯವರಿಗೆ ಮಾತ್ರ ಮೀಸಲು ಎಂಬುದು ಸ್ಪಷ್ಟವಾಗಿ ಗೊತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದರು.

ವೀಡಿಯೊದಲ್ಲಿ ಎಬಿಪಿ ನ್ಯೂಸ್ ವರದಿಗಾರ ಸಭೆಯಲ್ಲಿದ್ದವರಲ್ಲಿ ಕೆಲವರಲ್ಲಿ, ತಾವು ಯಾರಿಗೆ ವೋಟು ಹಾಕುತ್ತೀರಿ ಎಂದು ಕೇಳುತ್ತಾನೆ. ಅವರಲ್ಲಿ ಕೆಲವರು ನಾವು ‘ಬಿಜೆಪಿ’ಗೆ ವೋಟು ಹಾಕುವುದು ಎಂದು ಹೇಳುವುದು ವೀಡಿಯೊದಲ್ಲಿ ಕೇಳಿಬರುತ್ತದೆ.

- Advertisement -

ಪ್ರಸ್ತುತ ಬಿಹಾರ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರೀತಿ ಗಾಂಧಿ ಟ್ವೀಟ್ ಮಾಡಿರುವ ಈ ವೀಡಿಯೊದ ಸತ್ಯಾಸತ್ಯತೆಯನ್ನು ‘ಆಲ್ಟ್ ನ್ಯೂಸ್’ ಪರಿಶೀಲಿಸಿದೆ.

ಇದೇ ವೀಡಿಯೊವನ್ನು ‘ಇಂಡಿಯಾ ವಿದ್ ನಮೋ’ ಎಂಬ ಫೇಸ್ ಬುಕ್ ಪೇಜ್ ನಲ್ಲೂ ಶೇರ್ ಆಗಿದೆ. ಈ ವೀಡಿಯೊ ನೋಡಿದವರಿಗೆ, ಇದು ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ವೀಡಿಯೊ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.

ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಗಳಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸಿಲ್ಲ. ಅದಕ್ಕೂ ಮಿಗಿಲಾಗಿ, ವೀಡಿಯೊದಲ್ಲಿ ‘ಅತ್ಯಂತ ವೇಗದ ಫಲಿತಾಂಶ, ಮೇ 23ರಂದು, ಎಬಿಪಿ ನ್ಯೂಸ್ ನಲ್ಲಿ ಮಾತ್ರ’ ಎಂಬ ಬರಹ ಸ್ಕ್ರೀನ್ ನಲ್ಲಿ ಕಾಣಬಹುದು. ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಇದು 2019ರ ಮೇ 19ರಂದು ನಡೆದ ಲೋಕಸಭಾ ಚುನಾವಣಾ ಸಮಾವೇಶಕ್ಕೆ ಸಂಬಂಧಿಸಿದ್ದರು ಎಂಬುದು ಸ್ಪಷ್ಟವಾಗಿದೆ. ಇದೇ ವೀಡಿಯೊದ ಮುಂದುವರಿದ ಭಾಗದಲ್ಲಿ ಜನರು ತೇಜಸ್ವಿ ಯಾದವ್ ಗೆ ಮತಹಾಕುವಂತೆ ಹೇಳುತ್ತಿರುವ ಮತ್ತು ಇತರರಿಗೂ ಇದೇ ಸಲಹೆ ನೀಡುತ್ತಿರುವುದು ಕಂಡುಬರುತ್ತದೆ.

ಹೀಗಾಗಿ ಪ್ರೀತಿ ಗಾಂಧಿ ಶೇರ್ ಮಾಡಿರುವ ಆಯ್ದ ವೀಡಿಯೊ ಪ್ರಸ್ತುತ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟವಾಗಿದೆ.

Join Whatsapp