ಸುಶಾಂತ್ ಸಾವನ್ನು ಹತ್ಯೆಯೆಂದು ಬಿಂಬಿಸಿದ ಬಿಜೆಪಿ: ಅಧ್ಯಯನದಿಂದ ಬಹಿರಂಗ

Prasthutha|

ಮುಂಬೈ: ಬಾಲಿವುಡ್ ನಟ ಸುಶಾಂತ್ ಆತ್ಮಹತ್ಯೆ ಪ್ರಕರಣವನ್ನು “ಹತ್ಯೆ ಮತ್ತು ಸಂಚು” ಎಂಬುದಾಗಿ ಬದಲಾಯಿಸುವುದರಲ್ಲಿ ಬಿ.ಜೆ.ಪಿ ಪಾತ್ರ ವಹಿಸಿದೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳ ಸಂಶೋಧಕರು ನಡೆಸಿದ ಅಧ್ಯಯನದಿಂದ ಬಹಿರಂಗಗೊಂಡಿದೆ.

- Advertisement -

ಸಂಶೋಧಕರಾದ ಜೊಯೊಜೀತ್ ಪಾಲ್, ಸಯೇದಾ ಝೈನಬ್ ಅಕ್ಬರ್, ಅಂಕುರ್ ಶರ್ಮಾ, ಹಿಮಾನಿ ನೇಗಿ ಮತ್ತು ಅಣುಮೋಳ್ ಪಾಂಡ ಸಿದ್ಧಪಡಿಸಿರುವ ಸಂಶೋಧನೆಯು ಸುದ್ದಿ ಮಾಧ್ಯಮಗಳ ಯೂಟ್ಯೂಬ್ ಪೇಜ್, ರಾಜಕಾರಣಿಗಳು, ಪ್ರಭಾವಿಗಳು ಮತ್ತು ಮಾಧ್ಯಮ ಕುಳಗಳ ಹ್ಯಾಶ್ ಟ್ಯಾಗ್ ಗಳ ಕುರಿತು ಅಧ್ಯಯನ ನಡೆಸಿದ್ದು, ಬಿಜೆಪಿಗೆ ಸಂಬಂಧಿಸಿದ ವ್ಯಕ್ತಿಗಳ  ಟ್ವೇಟ್ ಗಳಲ್ಲಿ ಇತರ ಪಕ್ಷಗಳಿಗಿಂತ ಹೆಚ್ಚಾಗಿ ‘ಹತ್ಯೆ’ ಎಂಬ ಪದವನ್ನು ಬಳಸಿರುವುದು ಬಹಿರಂಗವಾಗಿದೆ.

ಜೂನ್ 14ರಂದು ಸುಶಾಂತ್ ಸಾವನ್ನಪ್ಪಿದ ದಿನದಿಂದ ಹಿಡಿದು ಸೆಪ್ಟೆಂಬರ್ 12, 2020ರ ತನಕದ ಪೋಸ್ಟ್ ಗಳ ಅಧ್ಯಯನ ಮಾಡಲಾಗಿದೆ. 2000 ಪತ್ರಕರ್ತರು ಮತ್ತು ಮಾಧ್ಯಮಗಳು, 7818 ರಾಜಕಾರಣಿಗಳ ಟ್ವೇಟ್ ಗಳನ್ನು ಅಧ್ಯಯನ ಮಾಡಲಾಗಿದೆ ಮತ್ತು 7171 ಯೂಟ್ಯೂಬ್ ವೀಡಿಯೊಗಳನ್ನು ವಿಶ್ಲೇಷಿಸಲಾಗಿದೆ.

- Advertisement -

ಕಾಂಗ್ರೆಸ್ ಮತ್ತು ಬಿಜೆಪಿಯ 7818 ರಾಜಕಾರಣಿಗಳು ಈ ಪ್ರಕರಣದ ಕುರಿತು 1,03,125 ಟ್ವೀಟ್ ಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಗೆ ವ್ಯತಿರಿಕ್ತವಾಗಿ ಬಿಜೆಪಿ ಟ್ವೇಟ್ ಗಳು ನಟನ ಸಾವಿನ ಕುರಿತು ಆತ್ಮಹತ್ಯೆಯ ಬದಲಾಗಿ ‘ಹತ್ಯೆ’ ಎಂಬ ಪದವನ್ನು ಬಳಸಿದ್ದವು.

Join Whatsapp