‘UPSC ಜಿಹಾದ್’ ಕಾರ್ಯಕ್ರಮ । ಸುಪ್ರೀಮ್ ಕೋರ್ಟ್ ತ್ರಿಸದಸ್ಯ ಪೀಠದಿಂದ ತಡೆಯಾಜ್ಞೆ

Prasthutha|

ನಾಗರಿಕ ಸೇವಾ ಪರೀಕ್ಷೆಗಳಲ್ಲಿ (UPSC)  ಅರ್ಹತೆ ಪಡೆದ ಮುಸ್ಲಿಮ್ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ‘UPSC ಜಿಹಾದ್’ ಎಂಬ ಸುದರ್ಶನ್ ನ್ಯೂಸ್ ಚಾನೆಲಿನ ಕಾರ್ಯಕ್ರಮಕ್ಕೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ತಡೆ ವಿಧಿಸಿದೆ. ಇದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡುವ ಕಾರ್ಯಕ್ರಮವಾಗಿದೆ ಎಂದು ಪೀಠ ಹೇಳಿದೆ . UPSC ಪರೀಕ್ಷೆಗಳಲ್ಲಿ ಮುಸ್ಲಿಮರು ‘ಒಳ ನುಸುಳು’ತ್ತಿದ್ದಾರೆ” ಎಂದು ಬಿಂಬಿಸುವ ಕಾರ್ಯಕ್ರಮವನ್ನು ಅದರ ಪತ್ರಕರ್ತ ಸುರೇಶ್ ಚಾವಂಕೆ ಇದೀಗಾಗಲೇ ಎರಡು ಕಂತುಗಳನ್ನು ಪ್ರಸಾರ ಮಾಡಿದ್ದ. ಕಾರ್ಯಕ್ರಮ ವಿವಾದದ ಕಿಡಿ ಹೊತ್ತಿಸಿದಾಗ ದೆಹಲಿ ಹೈಕೋರ್ಟ್ ಕೇಂದ್ರದ ಸಲಹೆ ಕೇಳಿತ್ತು. ಕೇಂದ್ರ ಅದಕ್ಕೆ ಅನುಮತಿ ನೀಡಿತ್ತು. ಇದೀಗ ಕೋರ್ಟ್ ತೀರ್ಪು,  ಮುಂದಿನ ಆದೇಶದ ವರೆಗೆ ಚಾನೆಲ್ ತನ್ನ ‘ಬಿಂದಾಸ್ ಬೋಲ್’ ಕಾರ್ಯಕ್ರಮದ ಮುಂದಿನ ಹಂತಗಳನ್ನು  ಪ್ರಸಾರ ಮಾಡದಂತೆ ತಡೆ ವಿಧಿಸಿದೆ.

- Advertisement -

 “ನಿಮ್ಮ ಈ ಕಾರ್ಯಕ್ರ,ಮ, ನಾಗರಿಕ ಸೇವೆಯಲ್ಲಿ ಮುಸ್ಲಿಮರು ಪಾಸಾಗುತ್ತಿರುವುದು ಒಂದು ಪಿತೂರಿಯ ಭಾಗವಾಗಿ ಎಂದು ಅವರನ್ನು ಚಿತ್ರಿಸುವ ಕಪಟ ಪ್ರಯತ್ನದಂತೆ ತೋರುತ್ತಿದೆ. ಇದು ಮುಸ್ಲಿಮರನ್ನು ನಿಂದಿಸಿ ಅವರನ್ನು ಕೆರಳಿಸುವ ಯತ್ನದಂತೆ ನ್ಯಾಯಾಲಯಕ್ಕೆ ಭಾಸವಾಗುತ್ತಿದೆ” ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಇಂದು ಮಲ್ಹೋತ್ರಾ ಮತ್ತು ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿತು.

Join Whatsapp