ಟೋಪಿ ಧರಿಸಿದ ಕಾರಣಕ್ಕೆ ಮುಸ್ಲಿಂ ಸಬ್ ಇನ್ ಸ್ಪೆಕ್ಟರ್ ಅಮಾನತು

Prasthutha|

ಗುವಾಹಟಿ: ಧಾರ್ಮಿಕ ಟೋಪಿಯನ್ನು ಧರಿಸಿದ್ದಕ್ಕಾಗಿ ಅಸ್ಸಾಂ ಪೊಲೀಸ್ ರೇಡಿಯೊ ಆರ್ಗನೈಝೇಶನ್ (ಎ.ಪಿ.ಆರ್.ಒ)ನ ಮುಸ್ಲಿಮ್ ಸಬ್ ಇನ್ ಸ್ಪೆಕ್ಟರ್ ಓರ್ವರನ್ನು ಅಮಾನತುಗೊಳಿಸಲಾಗಿದೆ. ಸಮವಸ್ತ್ರ ನಿಯಮದ ಉಲ್ಲಂಘನೆಯ ಆರೋಪದಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.

- Advertisement -

ಅಮಾನತುಗೊಂಡ ಸಬ್ ಇನ್ ಸ್ಪೆಕ್ಟರ್ ರನ್ನು ಮುಹಮ್ಮದ್ ಶೌಕತ್ ಅಲಿ ಎಂದು ಗುರುತಿಸಲಾಗಿದೆ. ಇಸ್ಲಾಮಿನ ನಂಬಿಕೆಗೆ ಸಂಬಂಧಿಸಿದ ಟೋಪಿ ಧರಿಸಿದ ಫೋಟೊ ವೈರಲ್ ಆದ ಬಳಿಕ ಅವರನ್ನು ಅಮಾನತುಗೊಳಿಸಲಾಗಿದೆ.

ಅಮೀನ್ ಗಾಂವ್ ನಲ್ಲಿ ಕರ್ತವ್ಯದಲ್ಲಿದ್ದಾಗ ನಮಾಝ್ ನ ಬಳಿಕ ಟೋಪಿಯನ್ನು ತೆಗೆಯಲು ಮರೆತಿದ್ದ ಶೌಕತ್ ರ ಫೋಟೊವನ್ನು ಸೆರೆಹಿಡಿಯಲಾಗಿತ್ತು ಎಂದು ಎಡಿಜಿಪಿ ಎಸ್.ಎನ್.ಸಿಂಗ್ ಹೇಳಿದ್ದಾರೆ.

- Advertisement -

ಸಮವಸ್ತ್ರ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಶೌಕತ್ ರನ್ನು ಪ್ರಸ್ತುತ ದಿಸ್ಪುರದಲ್ಲಿರುವ ಸಂದೇಶ ಸಂಯೋಜನಾ ಕೇಂದ್ರಕ್ಕೆ ನಿಯೋಜಿಸಲಾಗಿದೆ.

Join Whatsapp