ಉ.ಪ್ರ. ಸರಕಾರಿ ಆಸ್ಪತ್ರೆಯಲ್ಲಿ ಬಾಲಕಿಯ ಮೃತದೇಹವನ್ನು ಬೀದಿನಾಯಿ ತಿನ್ನುತ್ತಿದ್ದ ವೀಡಿಯೊ ವೈರಲ್ | ವ್ಯಾಪಕ ಆಕ್ರೋಶ

Prasthutha|

ಸಂಭಾಲ್ : ಉತ್ತರ ಪ್ರದೇಶದ ಸರಕಾರಿ ಆಸ್ಪತ್ರೆಯೊಂದರಲ್ಲಿ ಬಾಲಕಿಯೊಬ್ಬಳ ಮೃತದೇಹವನ್ನು ಬೀದಿ ನಾಯಿಯೊಂದು ತಿನ್ನುತ್ತಿರುವ ದೃಶ್ಯಾವಳಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರಕಾರಿ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ರಸ್ತೆ ಅಪಘಾತವೊಂದರಲ್ಲಿ ಬಾಲಕಿ ಮೃತಪಟ್ಟಿದ್ದಳು ಎನ್ನಲಾಗಿದೆ.

ಆಸ್ಪತ್ರೆಯ ನಿರ್ಜನ ಪ್ರದೇಶವೊಂದರಲ್ಲಿ ಸ್ಟ್ರೆಚರ್ ಒಂದರ ಮೇಲೆ ಮೃತದೇಹವನ್ನು ಮಲಗಿಸಲಾಗಿದ್ದು, ಅದರ ಮೇಲೆ ಬಿಳಿ ಬಟ್ಟೆ ಹೊದಿಸಲಾಗಿತ್ತು. ನಾಯಿ ಒಂದು ಬದಿಯ ಬಟ್ಟೆ ಎತ್ತಿ ಮೆಲ್ಲಮೆಲ್ಲನೆ ನೆಕ್ಕುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆ ಹಿಡಿಯಲಾಗಿದೆ.

- Advertisement -

ಬಿಜೆಪಿಗರು ಮಾತನಾಡುವಾಗಲೆಲ್ಲಾ ಗುಜರಾತ್, ಉತ್ತರ ಪ್ರದೇಶವನ್ನು ಮಾಡೆಲ್ ಆಗಿ ದಕ್ಷಿಣ ಭಾರತದ ಜನರಿಗೆ ಭಾಷಣ ಮಾಡುತ್ತಾರೆ. ಗುಜರಾತ್ ಮತ್ತು ಉತ್ತರ ಪ್ರದೇಶ ಕೋಮುವಾದಿ ಮನಸ್ಥಿಗೆ ಮಾತ್ರ ಮಾಡೆಲ್ ಆಗಿದ್ದು, ಅಭಿವೃದ್ಧಿಗೆ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಬಿಜೆಪಿಗರ ಪ್ರಧಾನಿ ಮೋದಿ ನಂತರದ ನಂ.2 ಮಾಡೆಲ್ ಸಿಎಂ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಇಂತದ್ದೊಂದು ಅಮಾನವೀಯ ಘಟನೆ ನಡೆಯುತ್ತಿದೆ ಎಂದರೆ, ಅಲ್ಲಿನ ಆಡಳಿತ ವ್ಯವಸ್ಥೆ ಎಷ್ಟೊಂದು ದುರ್ಬಲವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಇನ್ನೊಂದೆಡೆ, ಗುಜರಾತ್ ನಲ್ಲಿ ಕೋವಿಡ್ 19 ಆಸ್ಪತ್ರೆಯೊಂದರಲ್ಲಿ ಬೆಂಕಿ ದುರಂತ ಸಂಭವಿಸಿ ಐವರು ರೋಗಿಗಳು ಮೃತಪಟ್ಟಿರುವ ಘಟನೆಯನ್ನೂ ಇಲ್ಲಿ ಸ್ಮರಿಸಬಹುದಾಗಿದೆ.

Join Whatsapp