ಬಿಹಾರ ಜೀವಂತ ದಹನ ಪ್ರಕರಣ: ಸಂತ್ರಸ್ತೆ ಗುಲ್ನಾಝ್ ಕುಟುಂಬವನ್ನು ಭೇಟಿಯಾದ ಎಸ್.ಡಿ.ಪಿ.ಐ ನಿಯೋಗ: ಕಾನೂನು ಭರವಸೆ, ಪರಿಹಾರ ವಿತರಣೆ

Prasthutha|

 ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರ ಬಳಿಯ ರಸೂಲ್ ಪುರ್ ಎಂಬಲ್ಲಿ ಗುಲ್ನಾಝ್ ಎಂಬ ಬಾಲಕಿಯನ್ನು ಜೀವಂತ ದಹಿಸಿದ ಘಟನೆಯ ಕುರಿತು ಮಾಹಿತಿ ಸಂಗ್ರಹಿಸಲು ಹಾಗೂ ಸಂತ್ರಸ್ತ  ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಇಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಸಮಿತಿಯ ನಿಯೋಗವು ಸಂತ್ರಸ್ತ ಬಾಲಕಿಯ ಮನೆಗೆ ಭೇಟಿ ಕುಟುಂಬಕ್ಕೆ ಸಾಂತ್ವನ ಹೇಳಿ ಧನ ಸಹಾಯವನ್ನು ನೀಡಿತು. ಇದೇ ಸಂದರ್ಭದಲ್ಲಿ ಕಾನೂನು ಹೋರಾಟವನ್ನು ಯಶಸ್ವಿಯಾಗಿ ನಿರ್ವಹಿಸಲು ಸಮಾಲೋಚನೆ ನಡೆಸಿ ಕುಟುಂಬಕ್ಕೆ ಧೈರ್ಯತುಂಬಲಾಯಿತು ಮತ್ತು ಕಾನೂನು ಹೋರಾಟವನ್ನು ಎಸ್.ಡಿ.ಪಿ.ಐ ವತಿಯಿಂದ ಮುನ್ನಡೆಸುವ ಭರವಸೆ ನೀಡಲಾಯಿತು.

- Advertisement -

 ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಎಸ್.ಡಿ.ಪಿ.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಸಂತ್ರಸ್ತ ಕುಟುಂಬಕ್ಕೆ ಸರಕಾರವು 50 ಲಕ್ಷ ಪರಿಹಾರ, ಕುಟುಂಬಕ್ಕೆ ಪೋಲೀಸ್ ಭದ್ರತೆ, ಸಾಕ್ಷಿ ನಾಶಪಡಿಸುವವರ ಮೇಲೆ ಕೇಸು ದಾಖಲು, ಹಾಗೂ ತ್ವರಿತ ನ್ಯಾಯಾಲಯದ ಮೂಲಕ ಹತ್ಯಾ ಆರೋಪಿಗಳಿಗೆ ಒಂದು ವರ್ಷದ ಒಳಗೆ ಕಠಿಣ ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ರಾಷ್ಟ್ರೀಯ ಉಪಾಧ್ಯಕ್ಷರಾದ ದೆಹ್ಲಾನ್ ಬಾಖವಿ, ರಾಷ್ಟ್ರೀಯ ಕಾರ್ಯದರ್ಶಿ ಡಾ. ಮೆಹಬೂಬ್ ಷರೀಫ್, ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ, ಎಸ್.ಡಿ.ಪಿ.ಐ ಬಿಹಾರ ರಾಜ್ಯಾಧ್ಯಕ್ಷ ನಸೀಮ್ ಅಖ್ತರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಇಹ್ಸಾನ್ ಪರ್ವೇಜ್, ಅಡ್ವೊಕೇಟ್ ನೂರುದ್ದೀನ್ ಝಂಗಿ, ರಿಯಾಝ್ ಅಹ್ಮದ್ ಮಹುವಾ ಮತ್ತು ಇತರರು ನಿಯೋಗದಲ್ಲಿದ್ದರು.

Join Whatsapp