ಅಮೆರಿಕ ಇತಿಹಾಸದಲ್ಲೇ ಲಿಂಗಪರಿವರ್ತಿತ ಸಮುದಾಯದ ಪ್ರಪ್ರಥಮ ಸಂಸದೆ ಆಯ್ಕೆ

Prasthutha|

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಲಿಂಗಪರಿವರ್ತಿತರೊಬ್ಬರು ಸಂಸದೆಯಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಲವೇರ್ ರಾಜ್ಯದ ಸಂಸದ ಸ್ಥಾನವೊಂದಕ್ಕೆ ಸ್ಪರ್ಧಿಸಿದ್ದ ಡೆಮಾಕ್ರಟಿಕ್ ಅಭ್ಯರ್ಥಿ ಸಾರಾ ಮ್ಯಾಕ್ ಬ್ರೈಡ್ ಆಯ್ಕೆಯಾಗಿದ್ದು, ಅವರು ಹೊಸ ಇತಿಹಾಸ ಬರೆದಿದ್ದಾರೆ.

- Advertisement -

ಮೊದಲ ಸೆನೆಟ್ ಜಿಲ್ಲೆಯ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಲಿಂಗಪರಿವರ್ತಿತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಾರಾ, ರಿಪಬ್ಲಿಕನ್ ಅಭ್ಯರ್ಥಿ ಸ್ಟೀವ್ ವಾಷಿಂಗ್ಟನ್ ಅವರನ್ನು ಸೋಲಿಸಿದ್ದಾರೆ.

ಮತದಾರರು ಅಭ್ಯರ್ಥಿಯ ಚಿಂತನೆಗೆ ಬೆಲೆಕೊಟ್ಟಿದ್ದಾರೆ, ಅವರ ಅಸ್ಮಿತೆಗಲ್ಲ ಎಂಬುದಕ್ಕೆ ನನಗೆ ಸಂತೋಷವಾಗಿದೆ ಎಂದು ಸಾರಾ ಹೇಳಿದ್ದಾರೆ.  

Join Whatsapp