ಆರ್.ಎಲ್.ಪಿಯಿಂದ ಎನ್.ಡಿ.ಎ ಮೈತ್ರಿ ತೊರೆಯುವ ಬೆದರಿಕೆ

Prasthutha|

ಹೊಸದಿಲ್ಲಿ: ಕೃಷಿ ಕಾನೂನುಗಳನ್ನು ತಕ್ಷಣವೇ ಹಿಂದೆಗೆಯಬೇಕೆಂದು ಕೇಂದ್ರ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಕೇಳಿಕೊಂಡಿರುವ ಎನ್.ಡಿ.ಎ ಮಿತ್ರ ಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷ (ಆರ್.ಎಲ್.ಪಿ) ಇದಕ್ಕೆ ವಿಫಲವಾದಲ್ಲಿ ತಾನು ಮೈತ್ರಿಯನ್ನು ತೊರೆಯುವುದಾಗಿ ಬೆದರಿಕೆ ಹಾಕಿದೆ.

- Advertisement -

“ಅಮಿತ್ ಶಾರವರೇ, ದೇಶದಲ್ಲಿ ನಡೆಯುತ್ತಿರುವ ರೈತ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೂರೂ ಕೃಷಿ ಮಸೂದೆಗಳನ್ನು ತಕ್ಷಣವೇ ಹಿಂದೆಗೆಯಬೇಕು. ಸ್ವಾಮಿನಾಥನ್ ಆಯೋಗದ ಎಲ್ಲಾ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು. ಅದೇ ವೇಳೆ, ರೈತರ ಬಯಕೆಯಂತೆ ಅವರಿಗೆ ಮಾತುಕತೆಗೆ ಸರಿಯಾದ ಸಮಯ ಮತ್ತು ಜಾಗವನ್ನು ನಿಗದಿಪಡಿಸಬೇಕು” ಎಂದು ಆರ್.ಎಲ್.ಪಿ ಸಂಚಾಲಕ ಹನುಮಾನ್ ಬೇನಿವಾಲ್ ಹೇಳಿದ್ದಾರೆ.

2004ರ ನವೆಂಬರ್ 18ರಂದು ಯುಪಿಎ ಸರಕಾರ ರೈತರ ಕುರಿತ ರಾಷ್ಟ್ರೀಯ ಆಯೋಗ (ಎನ್.ಸಿ.ಎಫ್) ವನ್ನು ರಚಿಸಿತ್ತು. ಕೃಷಿ ವ್ಯವಸ್ಥೆಯಲ್ಲಿ ಸುಸ್ಥಿರತೆ ಅಭಿವೃದ್ಧಿ ಪಡಿಸುವುದು ಮತ್ತು ಕೃಷಿಯನ್ನು ಹೆಚ್ಚು ಲಾಭದಾಯಕ ಮಾಡುವುದು ಇದರ ಪ್ರಮುಖ ಉದ್ದೇಶವಾಗಿತ್ತು.

- Advertisement -

“ಆರ್.ಎಲ್.ಪಿ ಎನ್.ಡಿ.ಎಯ ಮೈತ್ರಿಯಾಗಿದ್ದರೂ, ರೈತರು ಆರ್.ಎಲ್.ಪಿಗೆ ಪ್ರಮುಖ ಬಲವಾಗಿದ್ದಾರೆ. ಹಾಗಾಗಿ ಈ ವಿಷಯದಲ್ಲಿ ಸರಿಯಾದ ಕ್ರಮವನ್ನು ತೆಗೆದುಕೊಳ್ಳದೇ ಇದ್ದರೆ, ರೈತರ ಹಿತಾಸಕ್ತಿಯ ದೃಷ್ಟಿಯಿಂದ ಎನ್.ಡಿ.ಎಯ ಮಿತ್ರನಾಗುವ ವಿಷಯದಲ್ಲಿ ನಾನು ಮರುಚಿಂತಿಸಬೇಕಾಗುತ್ತದೆ ಎಂದು ಬೆನಿವಾಲ್ ತಿಳಿಸಿದರು.

2109ರ ಲೋಕಸಭಾ ಚುನಾವಣೆಯಲ್ಲಿ ಆರ್.ಎಲ್.ಪಿ ರಾಜಸ್ಥಾನದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.

Join Whatsapp