ರಾಣಾ ಅಯ್ಯೂಬ್ ಗೆ ಅಮೆರಿಕಾದ MPAC ಯಿಂದ ‘ನಿರ್ಭೀತ’ ಪತ್ರಿಕೋದ್ಯಮಕ್ಕಾಗಿನ ಪ್ರಶಸ್ತಿ

Prasthutha|

► ಪ್ರಶಸ್ತಿಯನ್ನು ಗೌರಿ ಲಂಕೇಶ್ ಗೆ ಅರ್ಪಿಸಿದ ರಾಣಾ

- Advertisement -

ಖ್ಯಾತ ಪತ್ರಕರ್ತೆ ರಾಣಾ ಅಯ್ಯೂಬ್ ಗೆ ಅಮೆರಿಕಾದ ಮುಸ್ಲಿಮ್ ಸಾರ್ವಜನಿಕ ವ್ಯವಹಾರಗಳ ಸಮಿತಿ (MPAC) ಯು ನಿರ್ಭೀತ ಪತ್ರಕರ್ತರಿಗೆ ನೀಡುವ 2020ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.. ರಾಣಾ ಅವರಿಗೆ ‘ದಿಟ್ಟ ಧ್ವನಿ ಹಾಗೂ ಆತ್ಮಸಾಕ್ಷಿ ಇರುವ ಪತ್ರಕರ್ತೆ’ ಗಾಗಿನ ಈ ಪ್ರಶಸ್ತಿ ಎಂದು ಸಂಸ್ಥೆ ಹೇಳಿದೆ. ಇದೇ ವೇಳೆ ಸೆಪ್ಟಂಬರ್ 5 ರಂದು ತನಗೆ ದೊರೆತ ಈ ಪ್ರಶಸ್ತಿಯನ್ನು ರಾಣಾ ಅಯ್ಯೂಬ್ , 2017 ರಲ್ಲಿ ಅದೇ ದಿನ ಫ್ಯಾಶಿಸ್ಟ್ ಶಕ್ತಿಗಳಿಂದ ಹತ್ಯೆಯಾದ ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಸಮರ್ಪಿಸಿದ್ದಾರೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ ರಾಣಾ ಅವರು, “ಗೌರಿ ಲಂಕೇಶ್ ಅವರೇ, ಈ ಪ್ರಶಸ್ತಿ ನಿಮಗೆ”  ಎಂದು ಟ್ವೀಟ್ ಮಾಡಿದ್ದಾರೆ.

ರಾಣಾ ಅವರಿಗೆ ನೀಡಿರುವ ಪ್ರಶಸ್ತಿಯ ಕುರಿತು ಸಂಸ್ಥೆಯು, “ನೀವು ನಿಮ್ಮ ಜೀವಕ್ಕೆ ಹೆದರುವುದಾದರೆ ಇದು ನಿಮ್ಮ  ವೃತ್ತಿಯಲ್ಲ. ಹಲವಾರು ಬೆದರಿಕೆಗಳ ಹೊರತಾಗಿಯೂ ರಾಣಾ ಅಯ್ಯೂಬ್ ಕಾಶ್ಮೀರ ಸೇರಿದಂತೆ ಭಾರತದಲ್ಲಿ  ಹಿಂದುತ್ವ ರಾಷ್ಟ್ರೀಯತೆ ಬೆಳೆದು ಬಂದದ್ದರ ಕುರಿತು ನಿರ್ಭೀತಿಯಿಂದ ವರದಿ ಮಾಡಿದ್ದಾರೆ. ಅವರಿಗೆ ಅಕ್ಟೋಬರ್ 10 ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ  ನೀಡುತ್ತಿದ್ದೇವೆ” ಎಂದು ಸಂಸ್ಥೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.

- Advertisement -

MPAC ಸಂಸ್ಥೆಯ ನಿರ್ಭೀತ ಪತ್ರಿಕೋದ್ಯಮಕ್ಕಾಗಿನ ಈ ಪ್ರಶಸ್ತಿಯನ್ನು ಪಡೆದವರಲ್ಲಿ ಅಮೆರಿಕಾದ ಖ್ಯಾತ ಪತ್ರಕರ್ತೆ  ಕರೆನ್ ಅಟ್ಟಿಯಾ ಹಾಗೂ ಟರ್ಕಿಯಲ್ಲಿ ಕೊಲ್ಲಲ್ಪಟ್ಟ ಸೌದಿ ಪತ್ರಕರ್ತ ಜಮಾಲ್ ಕಶೋಗಿ ಸೇರಿದ್ದಾರೆ. ಜಮಾಲ್ ಕಶೋಗಿ, ಸೌದಿ ರಾಜ ವಂಶಸ್ಥರ ಕಟು ಟೀಕಾಕಾರರಾಗಿದ್ದು, ಆ ಕಾರಣಕ್ಕಾಗಿಯೇ ಸೌದಿ ರಾಜಕುಮಾರ ಸಲ್ಮಾನ್ ನ ಆದೇಶದ ಮೇರೆಗೆ ಟರ್ಕಿಯಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಕೊಲ್ಲಲ್ಪಟ್ಟರೆಂದು ಟರ್ಕಿಯ ತನಿಖಾ ಸಂಸ್ಥೆಗಳು ವರದಿ ಮಾಡಿದ್ದವು.

Join Whatsapp