ಸ್ವಾತಂತ್ರ್ಯ ಹೋರಾಟಗಾರ ರಾಘವೇಂದ್ರ ರಾವ್ ರ ಅಂತ್ಯ ಸಂಸ್ಕಾರ ನಡೆಸಿದ ಮುಸ್ಲಿಂ ಯುವಕರು

Prasthutha|

ಹೈದರಾಬಾದ್ : ಸ್ವಾತಂತ್ರ್ಯ ಹೋರಾಟಗಾರ ರಾಘವೇಂದ್ರ ರಾವ್ ಅವರು ಹೈದರಾಬಾದ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಲ್ಪಕಾಲದ ವಯೋ ಸಂಬಂಧಿ ಅನಾರೋಗ್ಯದ ಬಳಿಕ ಶುಕ್ರವಾರ ನಿಧನರಾಗಿದ್ದಾರೆ. ಆದರೆ, ಕೊರೋನ ಸಂಕಷ್ಟದ ಈ ಕಾಲದಲ್ಲಿ ಅವರ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದ ಪ್ರಕಾರವೇ, ಮುಸ್ಲಿಂ ಯುವಕರ ತಂಡವೊಂದು ನಡೆಸಿ, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ
ಜಗಿತಿಯಾಲ್ ನಲ್ಲಿ ಮುಸ್ಲಿಂ ಯುವಕರ ತಂಡ ಅಂತ್ಯ ಸಂಸ್ಕಾರ ನಡೆಸಿದೆ. ಫಯಾಜ್ ಆಲಿ ಮತ್ತು ಅವರ ಸ್ನೇಹಿತರು ಈ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯವನ್ನು ಗಮನದಲ್ಲಿಟ್ಟುಕೊಂಡೇ ಮಾಡಿದ್ದಾರೆ.

- Advertisement -

ರಾಘವೇಂದ್ರ ರಾವ್ ಅವರು ಮಲ್ಯಾಲ ಮಂಡಲ್ ನ ಮನಾಲದಲ್ಲಿ 1927ರಲ್ಲಿ ಜನಿಸಿದ್ದರು. ಅವರು ಪ್ರಾಥಮಿಕ ಶಿಕ್ಷಣ ಸ್ಥಳೀಯ ಶಾಲೆಯಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ಜಗಿತಿಯಾಲ್ ನಲ್ಲಿ ಪಡೆದಿದ್ದರು. ರಾವ್ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭ ತೆಲಂಗಾಣದ ನಿಝಾಮರ ವಿರೋಧ ಕಟ್ಟಿಕೊಂಡು ಹೋರಾಟ ನಡೆಸಿದ್ದರು. ತಮ್ಮ ಸ್ನೇಹಿತರಾದ ತಂಡ್ರ ಮೀನಾ ರಾವ್, ಜುವ್ವಾದಿ ರತ್ನಾಕರ್ ರಾವ್ ಮತ್ತು ಇತರರೊಂದಿಗೆ ಸೇರಿ ಅವರು ನಿಝಾಮರ ವಿರುದ್ಧ ಹೋರಾಟಗಳನ್ನು ನಡೆಸಿದ್ದರು.

1947, ಆ. 15ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಆದರೆ, ತೆಲಂಗಾಣದಲ್ಲಿ ನಿಝಾಮ್ ಸರಕಾರ ಭಾರತೀಯ ಧ್ವಜ ಹಾರಿಸಲು ಅನುಮತಿ ನೀಡಿರಲಿಲ್ಲ. ಆದರೆ, ರಾವ್ ಜಗಿತಿಯಾಲ್ ಹಳೆ ಹೈಸ್ಕೂಲ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿ, ನಿಝಾಮರ ವಿರುದ್ಧ ಹೋರಾಟ ಸಂಘಟಿಸಿದ್ದರು.

- Advertisement -

ಹೈದರಾಬಾದ್ ಭಾರತ ಸರಕಾರದೊಳಗೆ ವಿಲೀನವಾದ ಬಳಿಕ, ರಾಘವೇಂದ್ರ ರಾವ್ ಸಾಮಾನ್ಯ ರೈತರಾಗಿ ಜೀವನ ನಡೆಸುತ್ತಿದ್ದರು. ಸರಕಾರದ ರೈತು ಬಂಧು ಮೊತ್ತವನ್ನು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಹಿಂದಿರುಗಿಸಿ, ಬಡ ರೈತರಿಗೆ ನೀಡುವಂತೆ ವಿನಂತಿಸಿದ್ದರು. ಜಿಲ್ಲಾ ಸ್ವಾತಂತ್ರ್ಯ ಹೊರಾಟಗಾರರ ಸಂಘದ ಅಧ್ಯಕ್ಷರಾಗಿಯೂ ರಾವ್ ಸೇವೆ ಸಲ್ಲಿಸಿದ್ದರು.

Join Whatsapp