ಜಾಗತಿಕ ಅತಿಹೆಚ್ಚು ಗುರುತಿಸಲ್ಪಟ್ಟ ಸಂಶೋಧಕರ ಪಟ್ಟಿಯಲ್ಲಿ ದೆಹಲಿಯ ಜಾಮಿಯಾ ಮಿಲ್ಲಿಯಾ ವಿವಿಯ ಪ್ರೊ. ಇಮ್ರಾನ್ ಅಲಿ

Prasthutha|

ನವದೆಹಲಿ : ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕೆಮಿಸ್ಟ್ರಿ ವಿಭಾಗದ ಪ್ರೊ. ಇಮ್ರಾನ್ ಅಲಿ ಅತಿಹೆಚ್ಚು ಗುರುತಿಸಲ್ಪಟ್ಟ ಸಂಶೋಧಕರ(ಎಚ್ ಸಿಆರ್ – 2020) ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಮೆರಿಕದ ವೆಬ್ ಆಫ್ ಸೈನ್ಸ್ ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿ ಪ್ರೊ. ಅಲಿ ಅವರ ಹೆಸರಿದೆ.

- Advertisement -

ಪ್ರೊ. ಅಲಿ ಅವರ ಸಾಧನೆಗೆ ಜೆಎಂಐ ವಿವಿಯ ಕುಲಪತಿ ಪ್ರೊ. ನಜ್ಮಾ ಅಖ್ತರ್ ಅಭಿನಂದಿಸಿದ್ದಾರೆ.

ಕೆಲವು ದಿನಗಳ ಹಿಂದೆ ಅಮೆರಿಕ ಮೂಲದ ಸ್ಟಾನ್ ಫೋರ್ಟ್ ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿದ್ದ ಅನಾಲಿಟಿಕಲ್ ಕೆಮಿಸ್ಟ್ರಿ ವಿಭಾಗದ ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಪ್ರೊ. ಅಲಿ ಅವರು ಭಾರತದಲ್ಲಿ ನಂ.1 ಮತ್ತು ಜಗತ್ತಿನಲ್ಲಿ 24ನೇ ಸ್ಥಾನದಲ್ಲಿ ಗುರುತಿಸಲ್ಪಟ್ಟಿದ್ದರು.

- Advertisement -

ಪ್ರೊ. ಅಲಿ ಅವರು ಇಲ್ಲಿ ವರೆಗೆ 457 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ, ಅದರಲ್ಲಿ 210 ವೆಬ್ ಆಫ್ ಸೈನ್ಸ್ ಒಂದರಲ್ಲೇ ಪ್ರಕಟಗೊಂಡಿದೆ. ಎಚ್ ಸಿಆರ್ -2020ರಲ್ಲಿ 6,167 ಸಂಶೋಧಕರ ಪಟ್ಟಿ ಬಿಡುಗಡೆಯಾಗಿದೆ. ಅವರಲ್ಲಿ 60 ವಿಭಿನ್ನ ದೇಶದ ಸಂಶೋಧಕರಿದ್ದಾರೆ ಮತ್ತು 26 ನೊಬೆಲ್ ಪುರಸ್ಕೃತರ ಹೆಸರೂ ಇದೆ.

Join Whatsapp