ಪಟೇಲ್ ಹಿನ್ನೆಲೆಯಲ್ಲಿ ನಿಂತು ಇತರರಿಗೆ ಹೆಸರು ಗಳಿಸಲು ಬಿಡುತ್ತಿದ್ದರು: ಸೋನಿಯಾ

Prasthutha|

ಹೊಸದಿಲ್ಲಿ: ನ್ಯಾಶನಲ್ ಹೆರಾಲ್ಡ್ ನಲ್ಲಿ ಶನಿವಾರ ಪ್ರಕಟವಾದ ಶ್ರದ್ಧಾಂಜಲಿಯಲ್ಲಿ ಕಾಂಗ್ರೆಸ್ ನ ಮಧ್ಯಂತರ ಅಧ್ಯಕ್ಷೆ ಸೋನಿಯಾಗಾಂಧಿ ತನ್ನ ದೀರ್ಘ ಕಾಲದ ನಂಬಿಕಸ್ಥ ಸಹಾಯಕ ಅಹ್ಮದ್ ಪಟೇಲ್ ರನ್ನು ಸ್ಮರಿಸಿದ್ದು, ತಾನು ಸಲಹೆ ಮತ್ತು ಸಮಾಲೋಚನೆಯ ಅಗತ್ಯವಿದ್ದಾಗ ಅವರನ್ನು ಆಧರಿಸಿಕೊಳ್ಳುತ್ತಿದ್ದೆ ಎಂದಿದ್ದಾರೆ.

- Advertisement -

‘ಅಹ್ಮದ್ ಗೆ ಬೀಳ್ಕೊಡುಗೆ’ ಎಂಬ ನಾಮದ ಶ್ರದ್ಧಾಂಜಲಿಯಲ್ಲಿ, “ನಾನು ಕಾಂಗ್ರೆಸ್ ನ ಮಧ್ಯಂತರ ಮುಖ್ಯಸ್ಥೆಯಾದಂದಿನಿಂದ, ಪಟೇಲ್ “ನನ್ನ ಪರವಾಗಿ ನಂಬಿಕಸ್ಥ ಸಹೋದ್ಯೋಗಿಯಾಗಿದ್ದರು…ಕಾಂಗ್ರೆಸ್ ಸರಿಯಾದ್ದನ್ನು ಮಾಡಲು ನಾನು ಯಾವುದೇ ಪ್ರಶ್ನೆಗಳಿಲ್ಲದೆ ಆಧರಿಸಿಕೊಳ್ಳಬಲ್ಲ ಓರ್ವ ವ್ಯಕ್ತಿಯಾಗಿದ್ದರು” ಎಂದು ಸೋನಿಯಾ ಬರೆದಿದ್ದಾರೆ. 

“ಅವರು ಕಾಂಗ್ರೆಸ್ ಅಧಿಕಾರದಲ್ಲಿರುವಾಗಲೂ ಸಾರ್ವಜನಿಕ ಕಚೇರಿಯಿಲ್ಲದೆ, ಯಾವುದೇ ಪ್ರಚಾರವಿಲ್ಲದೆ, ಯಾವುದೇ ಸಾರ್ವಜನಿಕ ಗುರುತು ಅಥವಾ ಪ್ರಶಂಸೆಗಳಿಲ್ಲದೆ ಉಳಿಯಲು ಅವರು ಬಯಸಿದರು. ಸಾರ್ವಜನಿಕರ ದೃಷ್ಟಿ ಮತ್ತು ಪ್ರಚಾರದಿಂದ ದೂರವಿದ್ದು ಅವರು ಮೌನವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದರು. ಅವರ ಕೆಲಸದ ರೀತಿಯು ಅವರ ಮೌಲ್ಯ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಿತು” ಎಂದು ಸೊನಿಯಾ ಬರೆದಿದ್ದಾರೆ.

- Advertisement -

ತನ್ನ ಆತ್ಮವಿಶ್ವಾಸ ಮತ್ತು ಬಿಕ್ಕಟ್ಟು ನಿರ್ವಹಣೆಯ ಕುರಿತು ಮಾತನಾಡುತ್ತಾ ಸೋನಿಯಾ ಗಾಂಧಿ, “ಪಟೇಲ್ ಯಾವಾಗಲೂ ಹಿನ್ನೆಲೆಯಲ್ಲಿ ಉಳಿದು ಇತರರಿಗೆ ಹೆಸರು ಪಡೆಯಲು ಅವಕಾಶ ಮಾಡಿಕೊಡುವ ಅಪರೂಪದ ವ್ಯಕ್ತಿಯಲ್ಲೋರ್ವರಾಗಿದ್ದರು” ಎಂದು ಹೇಳಿದರು.

Join Whatsapp