November 3, 2020

ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರ ಹತ್ಯೆ

ಕಲಬುರಗಿ : ಇಲ್ಲಿನ ಕೈಲಾಸ ನಗರದಲ್ಲಿ ಗ್ರಾಮ ಪಂಚಾಯತಿ ಸದಸ್ಯರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ಸೋಮವಾರ ತಡ ರಾತ್ರಿ ಈ ಘಟನೆ ನಡೆದಿದೆ.

ಅಳಂದ ತಾಲೂಕಿನ ಕಡಗಂಚಿ ಗ್ರಾಮ ಪಂಚಾಯತಿ ಸದಸ್ಯ ಶಿವಲಿಂಗಪ್ಪ ಭೂಶೆಟ್ಟಿ ಎಂಬವರು ಮೃತಪಟ್ಟವರು. ಕೆಲ ತಿಂಗಳಿನಿಂದ ಭೂಶೆಟ್ಟಿ ಅವರು ಕಲಬುರಗಿಯ ಕೈಲಾಸ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಸೋಮವಾರ ತಡ ರಾತ್ರಿ 11 ಗಂಟೆಗೆ ಮನೆ ಸಮೀಪ ನಿಂತುಕೊಂಡಿದ್ದಾಗ ಅಪರಿಚಿತರ ಗುಂಪು ದಾಳಿ ನಡೆಸಿ ಹತ್ಯೆ ಮಾಡಿದೆ.

ಕೊಲೆಗೆ ಕಾರಣ ಗೊತ್ತಾಗಿಲ್ಲ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ಸುದ್ದಿಗಳು