November 13, 2020

ರಾಹುಲ್ ಗಾಂಧಿ ವಿಧೇಯ ವಿದ್ಯಾರ್ಥಿಯ ಹಾಗೆ, ಆದರೆ ಸಾಮರ್ಥ್ಯ ಕಡಿಮೆ : ಬರಾಕ್ ಒಬಾಮ

ವಾಷಿಂಗ್ಟನ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಮುಂಬರುವ ಪುಸ್ತಕವೊಂದರಲ್ಲಿ ಉಲ್ಲೇಖಿಸಿದ್ದಾರೆ. ರಾಹುಲ್ ಗಾಂಧಿ ಓರ್ವ ಶಿಕ್ಷಕನನ್ನು ಮೆಚ್ಚಿಸಲು ಪ್ರಯತ್ನಿಸುವ ವಿಧೇಯ ವಿದ್ಯಾರ್ಥಿಯಂತೆ, ಆದರೆ ಅವರಲ್ಲಿ ಆ ಸಾಮರ್ಥ್ಯ ಮತ್ತು ಪಾಂಡಿತ್ಯ ಕಡಿಮೆ ಎಂದು ಒಬಾಮ ಬಣ್ಣಿಸಿದ್ದಾರೆ.

ಮಂಗಳವಾರ ಬಿಡುಗಡೆಯಾಗಲಿರುವ ‘ಎ ಪ್ರಾಮಿಸ್ಡ್ ಲ್ಯಾಂಡ್’ ಎಂಬ ಪುಸ್ತಕದಲ್ಲಿ ರಾಹುಲ್ ಗಾಂಧಿ ಬಗ್ಗೆ ಒಬಾಮ ಪ್ರಸ್ತಾಪಿಸಿದ್ದಾರೆ.
“ರಾಹುಲ್ ಗಾಂಧಿ ಅವರಲ್ಲಿ ಅಸ್ಥಿರವಾದ, ಅಜ್ಞಾತ ಗುಣವಿದೆ. ಅವರೊಬ್ಬ ಕೋರ್ಸ್ ವರ್ಕ್ ಮುಗಿಸಿದ್ದ ವಿದ್ಯಾರ್ಥಿಯಾಗಿದರೆ, ಶಿಕ್ಷಕನನ್ನು ಮೆಚ್ಚಿಸುವುದಕ್ಕೆ ಕಾತುರದಿಂದ ಕಾಯುವ ವಿದ್ಯಾರ್ಥಿಯಂತೆ ಇದ್ದಾರೆ. ಆದರೆ ಅವರಲ್ಲಿ ಸಾಮರ್ಥ್ಯ ಅಥವಾ ವಿಷಯದಲ್ಲಿ ಪಾಂಡಿತ್ಯವಂತರಾಗುವ ಗುಣದ ಕೊರತೆಯಿದೆ’’ ಎಂದು ಒಬಾಮ ಅಭಿಪ್ರಾಯ ಪಟ್ಟಿದ್ದಾರೆ.

ಟಾಪ್ ಸುದ್ದಿಗಳು