‘ನೋಬೆಲ್ ಶಾಂತಿ ಪ್ರಶಸ್ತಿ ನನಗೆ ಸಿಗಬೇಕು’ : ಚುನಾವಣಾ ರಾಲಿಯಲ್ಲಿ ಟ್ರಂಪ್ ಬಯಕೆ!

Prasthutha|

ಈ ಬಾರಿಯ ಶಾಂತಿ ನೋಬೆಲ್ ಪ್ರಶಸ್ತಿಗೆ ನಾನು ಅರ್ಹನೆಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸೆರ್ಬಿಯಾ- ಕೊಸಾವೋ ಹತ್ಯಾಕಾಂಡವನ್ನು ನಾನು ಕೊನೆಗೊಳಿಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಉತ್ತರ ಕೊರೊಲಿನಾದಲ್ಲಿ ನಡೆದ ಚುನಾವಣಾ ಪ್ರಚಾರ ರಾಲಿಯಲ್ಲಿ ಟ್ರಂಪ್ ಮಾತನಾಡುತ್ತಿದ್ದರು.” ಕೊಸಾವೋ ಮತ್ತು ಸೆರ್ಬಿಯಾ ನಡುವಿನ ಹತ್ಯಾಕಾಂಡವನ್ನು ನಾವು ಕೊನೆಗೊಳಿಸುತ್ತಿದ್ದೇವೆ. ಅವರು ಹಲವು ವರ್ಷಗಳಿಂದ ಪರಸ್ಪರ ಕೊಲ್ಲುವುದನ್ನು ಕೊನೆಗೊಳಿಸಲಿದ್ದಾರೆ. ನಾವು ಜೊತೆಯಾಗಿರಬಹುದೆಂದು ನಾನು ಅವರಿಗೆ ಹೇಳಿದೆ” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

- Advertisement -

ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವೂಸಿಕ್ ಮತ್ತು ಕೊಸೋವೋ ಪ್ರಧಾನಿ ಅಬ್ದುಲ್ಲಾ ಹೋತಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆಂದು ಟ್ರಂಪ್ ಹೇಳಿದ್ದಾರೆ. ಆದರೆ ಚರ್ಚೆಯಲ್ಲಿ ಇದುವರೆಗೆ ಪ್ರಯೋಜನವಾಗಿಲ್ಲ ಎಂಬುವುದು ಕೂಡಾ ವಾಸ್ತವ. “ಇಸ್ರೇಲ್ ಮತ್ತು ಯುಎಇ ನಡುವಿನ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಟ್ರಂಪ್ ಅವರನ್ನು ಶಾಂತಿ ನೋಬೆಲ್ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ನಾರ್ವೆ ಸಂಸತ್ ಸದಸ್ಯ ಕ್ರಿಶ್ಚಿಯನ್ ಟ್ರೈಬಿಂಗ್ ನನ್ನನ್ನು ನೋಬೆಲ್ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದಾರೆ. ನಂತರ ಇಸ್ರೇಲ್ ಮತ್ತು ಬಹ್ರೈನ್ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು” ಎಂದು ಟ್ರಂಪ್ ಹೇಳಿದರು.

ಶಾಂತಿ ನೋಬೆಲ್ ಪ್ರಶಸ್ತಿಗೆ ಟ್ರಂಪ್ ನ್ನು ನಾಮ ನಿರ್ದೇಶನ ಮಾಡುವುದು ಇದು ಎರಡನೇ ಬಾರಿಯಾಗಿದೆ. ಮೊದಲ ಬಾರಿ ನಾಮನಿರ್ದೇಶನ ಮಾಡಿದ್ದು 2019 ರಲ್ಲಾಗಿತ್ತು. ಹಲವಾರು ವರ್ಷಗಳಿಂದ ಫೆಲೆಸ್ತೀನಿಯರನ್ನು ಆಕ್ರಮಣ ಮಾಡಿ ಹಿಂಸಾಚಾರ ಎಸಗುತ್ತಿರುವ ಇಸ್ರೇಲ್ ಪರ ನಿಂತಿರುವ ಟ್ರಂಪ್ ರನ್ನು ಶಾಂತಿ ನೋಬೆಲ್ ಗೆ ನಾಮನಿರ್ದೇಶನ ಮಾಡಿರುವುದು ಹಾಸ್ಯಾಸ್ಪದವಾಗಿದೆ.

Join Whatsapp