ನ್ಯಾಶನಲ್ ಕಾನ್ಫರೆನ್ಸ್ ಮಾಜಿ ಶಾಸಕ ಅಲ್ತಾಫ್ ಅಹಮದ್ ವಾನಿಗೆ ದುಬೈ ಪ್ರವಾಸಕ್ಕೆ ತಡೆ

Prasthutha|

ನವದೆಹಲಿ : ಜಮ್ಮು-ಕಾಶ್ಮೀರ ಮೂಲದ ನ್ಯಾಶನಲ್ ಕಾನ್ಫರೆನ್ಸ್ ನಾಯಕ, ಮಾಜಿ ಶಾಸಕ ಅಲ್ತಾಫ್ ಅಹಮದ್ ವಾನಿ ಅವರನ್ನು ದುಬೈ ವಿಮಾನ ಹತ್ತುವಾಗ ತಡೆ ಹಿಡಿಯಲಾಗಿದ್ದು, ವಿದೇಶಿ ಪ್ರವಾಸಕ್ಕೆ ನಿರ್ಬಂಧ ವಿಧಿಸಲಾಗಿದೆ. ಜಮ್ಮು-ಕಾಶ್ಮೀರದ 33 ರಾಜಕಾರಣಿಗಳಿಗೆ ವಿದೇಶ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿತ್ತು.

- Advertisement -

ವಿದೇಶಿ ಪ್ರವಾಸಕ್ಕೆ ನಿರ್ಬಂಧಿಸಲ್ಪಟ್ಟ ರಾಜಕಾರಣಿಗಳ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಫರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರ ಹೆಸರುಗಳಿಲ್ಲ.

ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಉದ್ದೇಶದಿಂದ ವಾನಿ ಅವರು ದುಬೈ ವಿಮಾನ ಹತ್ತಲು ತೆರಳಿದ್ದಾಗ ಅವರನ್ನು ತಡೆ ಹಿಡಿಯಲಾಯಿತು.

- Advertisement -

ವಿಮಾನ ನಿಲ್ದಾಣದ ಇಮಿಗ್ರೇಶನ್ ಸೆಂಟರ್ ಗೆ ತೆರಳುತ್ತಿದ್ದಂತೆ, ಅಲ್ಲಿಂದ ನಿಮ್ಮ ಪಾಸ್ ಪೋರ್ಟ್ ನಲ್ಲಿ ಕೊಂಚ ಲೋಪವಿದೆ ಎಂದು ಹೇಳಿ ಕೋಣೆಯೊಂದಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಯಾವುದೇ ಕಾರಣ ನೀಡದೆ ಮೂರು ಗಂಟೆಗಳ ಕಾಲ ಕಾಯಿಸಲಾಯಿತು. ಯಾತಕ್ಕಾಗಿ ತಮ್ಮನ್ನು ತಡೆಹಿಡಿಯಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಸಿರಲಿಲ್ಲ ಎಂದು ವಾನಿ ತಿಳಿಸಿದ್ದಾರೆ.

Join Whatsapp