ಗುಜರಾತ್ | ‘ನ್ಯೂಟ್ರಿ ಟ್ರೈನ್’ ನಲ್ಲಿ ಮೋದಿ ಪ್ರಯಾಣ | ಟ್ವಿಟರ್ ನಲ್ಲಿ ಲೇವಡಿ

Prasthutha|

ನರ್ಮದಾ : ಗುಜರಾತ್ ನ ಕೇವಡಿಯಾದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಆರೋಗ್ಯ ವನ’ ಉದ್ಘಾಟಿಸಿದ್ದಾರೆ. ‘ಆರೋಗ್ಯ ವನ’ ಉದ್ಘಾಟನೆಯ ಬಳಿಕ, ಅವರು ‘ನ್ಯೂಟ್ರಿ ಟ್ರೈನ್’ ಪ್ರಯಾಣ ಮಾಡಿ, ಆರೋಗ್ಯವನದಲ್ಲಿ ಸುತ್ತಾಡಿದ್ದಾರೆ. ಪ್ರಧಾನಿಯವರು ‘ನ್ಯೂಟ್ರಿ ಟ್ರೈನ್’ನಲ್ಲಿ ಪ್ರಯಾಣಿಸಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿಗೆ ಕಾರಣವಾಗಿದೆ.

- Advertisement -

ಹೇಳಿದ್ದು ಬುಲೆಟ್ ಟ್ರೈನ್ ಆದರೆ, ಪ್ರಧಾನಿ ಈಗ ಓಡಿಸುತ್ತಿರುವುದು ಮಕ್ಕಳ ರೈಲಿನಂತಹ ‘ನ್ಯೂಟ್ರಿ ರೈಲು’ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿಯವರ ಜೊತೆ ಈ ವೇಳೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಉಪಸ್ಥಿತರಿದ್ದರು. ಕೋವಿಡ್ 19 ಸೋಂಕಿನ ಬಳಿಕ ಪ್ರಧಾನಿ ಮೋದಿಯವರು ಇದೇ ಮೊದಲ ಬಾರಿ ತಮ್ಮ ತವರು ರಾಜ್ಯಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

- Advertisement -

“ಬುಲೆಟ್ ರೈಲು ತರುತ್ತೇನೆ ಎಂದು ಒಬ್ಬ ವ್ಯಕ್ತಿ ಭರವಸೆ ನೀಡಿದ್ದರು, ಆದರೆ ಮಕ್ಕಳ ಆಟದ ರೈಲು ಉದ್ಘಾಟಿಸಿದರು, ಅದನ್ನು ನ್ಯೂಟ್ರಿ ಟೈನ್ ಎನ್ನುತ್ತಾರೆ’’ ಎಂದು ಆರ್.ಕೆ. ದಾಹರ್ವಾಲ್ ಎಂಬವರು ಟ್ವೀಟ್ ಮಾಡಿದ್ದಾರೆ.

“ನನ್ನದು ಮಹಾನ್ ದೇಶ. ಇದಕ್ಕೆಲ್ಲಾ ಸಮಯವಿದೆ, ಆದರೆ ಹಿಂದೂಗಳಿಗಾಗಿ ಒಂದು ನಿಮಿಷವೂ ಸಮಯವಿಲ್ಲ’’ ಎಂದು ರೋಹಿತ್ ತಿವಾರಿ ಎಂಬವರು ಟ್ವೀಟ್ ಮಾಡಿದ್ದಾರೆ.

Join Whatsapp