ಮೆಹಬೂಬಾ ಮುಫ್ತಿಯನ್ನು ಎಷ್ಟು ಕಾಲ ಬಂಧನದಲ್ಲಿಡುತ್ತೀರಿ?: ಸರಕಾರಕ್ಕೆ ಸು.ಕೋರ್ಟು ಪ್ರಶ್ನೆ

Prasthutha|

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರ  ಬಂಧನವನ್ನು ಮುಂದುವರಿಸಲು ಉದ್ದೇಶಿಸಿದ್ದೀರಾ ಎಂದು ಸುಪ್ರೀಂ ಕೋರ್ಟು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ. ಮುಫ್ತಿಗೆ ಸಂಬಂಧಪಟ್ಟ ತನ್ನ ನಿರ್ಧಾರವನ್ನು ತಿಳಿಸುವಂತೆ ನ್ಯಾಯಮೂರ್ತಿ ಸಂಜಯ್ ಕಿಶನ್ ನೇತೃತ್ವದ ನ್ಯಾಯಪೀಠವು ಕೇಂದ್ರ ಸರಕಾರಕ್ಕೆ ನಿರ್ದೇ ಶನ ನೀಡಿದೆ.

- Advertisement -

ನೀವು ಎರಡು ವಿಷಯಗಳ ಬಗ್ಗೆ ನಮಗೆ ತಿಳಿಸಬೇಕು ಒಬ್ಬ ವ್ಯಕ್ತಿಯನ್ನು ಬಂಧನದಲ್ಲಿರಿಸಬಹುದಾದ ಗರಿಷ್ಠ ಕಾಲಾವಧಿ ಎಷ್ಟು?  ನಿಮ್ಮ ನಿರ್ಧಾರ ಏನು? ಮತ್ತು ಎಷ್ಟು ದಿನ ಬಂಧನದಲ್ಲಿರಿಸಲು ನೀವು ಬಯಸುತ್ತೀರಿ? ಎಂದು ನ್ಯಾಮೂರ್ತಿ ಕೌಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸರಕಾರವನ್ನು ಕೇಳಿದ್ದಾರೆ.

ಮೆಹಬೂಬಾ ಮುಫ್ತಿಯನ್ನು ಜಮ್ಮು ಕಾಶ್ಮೀರ ಸಾರ್ವಜನಿಕ ಸುರಕ್ಷಣಾ ಕಾಯ್ದೆ(ಪಿ.ಎಸ್.ಎ) ಅಡಿಯಲ್ಲಿ ಬಂಧನದಲ್ಲಿರಿಸಿರುವುದನ್ನು ಪ್ರಶ್ನಿಸಿ ಮುಫ್ತಿ ಅವರ ಪುತ್ರಿ ಇಲ್ಟಿಜಾ ಸಲ್ಲಿಸಿದ್ದ ಅರ್ಜಿಯಲ್ಲಿ ಸುಪ್ರೀಂ ಕೋರ್ಟು ಮಧ್ಯಪ್ರವೇಶಿಸಿದೆ.

- Advertisement -

370ನೇ ವಿಧಿಯನ್ನು ರದ್ದುಪಡಿಸಿದ ನಂತರ 2019ರ ಆಗಸ್ಟ್ 5 ರಿಂದ ಮೆಹಬೂಬಾ ಮುಫ್ತಿ ಬಂಧನದಲ್ಲಿದ್ದಾರೆ. ಜಮ್ಮುಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ತಾನು ಮಾತನಾಡುವುದಿಲ್ಲವೆಂಬ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದರಿಂದ ಮುಫ್ತಿಯವರ ಬಂಧನವನ್ನು ಮುಂದುವರಿಸಲಾಗಿದೆ ಎಂದು ಇಲ್ಟಿಜಾ ಆರೋಪಿಸಿದ್ದಾರೆ.

Join Whatsapp