ಮಧ್ಯಪ್ರದೇಶ | ‘ಲವ್ ಜಿಹಾದ್’ ವಿರುದ್ಧದ ಹೊಸ ಕಾನೂನಿನಲ್ಲಿ ಬಲವಂತದ ಮತಾಂತರಕ್ಕೆ 10 ವರ್ಷ ಜೈಲು

Prasthutha|

ಭೋಪಾಲ್ : ಮಧ್ಯಪ್ರದೇಶ ಸರಕಾರ ‘ಲವ್ ಜಿಹಾದ್’ ವಿರುದ್ಧ ಮಾಡಲು ಹೊರಟಿರುವ ಹೊಸ ಕಾನೂನಿನಲ್ಲಿ ಬಲವಂತದ ಮತಾಂತರಕ್ಕೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪವಿದೆ.

- Advertisement -

ತನ್ನ ಸಹ ಸಂಘಟನೆಗಳ ಮುಖಾಂತರ ಬಿಜೆಪಿ ಸೃಷ್ಟಿಸಿರುವ ‘ಲವ್ ಜಿಹಾದ್’ ಕಟ್ಟುಕತೆಗಳ ಪ್ರಕಾರ, ಹಿಂದೂ ಮಹಿಳೆಯರನ್ನು ಮುಸ್ಲಿಮ್ ಪುರುಷರು ಮದುವೆಯಾಗುವ ಉದ್ದೇಶದಿಂದ ಬಲವಂತವಾಗಿ ಮತಾಂತರ ಮಾಡುತ್ತಾರೆ ಎಂದು ಆರೋಪಿಸಲಾಗುತ್ತಿದೆ. ಈ ಸಂಬಂಧ ಕಾನೂನು ತರುವುದಾಗಿ ಬಿಜೆಪಿ ಆಡಳಿತದ ರಾಜ್ಯಗಳು ಘೋಷಿಸಿವೆ.

ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2020ರ ಕರಡು ಪ್ರತಿ ಸಿದ್ಧವಾಗಿದ್ದು, ಡಿ.28ರಿಂದ ಆರಂಭಗೊಳ್ಳುವ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುವುದು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

- Advertisement -

ಉತ್ತರ ಪ್ರದೇಶ ಸರಕಾರ ಕೂಡ ಇದೇ ಮಾದರಿಯ ಮಸೂದೆಗೆ ತನ್ನ ಸಚಿವ ಸಂಪುಟದಲ್ಲಿ ಸಮ್ಮತಿ ಪಡೆದಿದೆ.  

Join Whatsapp