ಹಥ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕೊನೆಯ ಮಾತುಗಳೇನು?

Prasthutha|

ಹೊಸದಿಲ್ಲಿ: ಉತ್ತರ ಪ್ರದೇಶದ ಹಥ್ರಾಸ್ ನ ಬೂಲ್ಘರಿ ಗ್ರಾಮದ ಸಾಮೂಹಿಕ ಅತ್ಯಾಚಾರಕ್ಕೊಳಗಾದ 19ರ ಹರೆಯದ ದಲಿತ ಯುವತಿ ತನ್ನ ಮೇಲೆ ಆದ ದೌರ್ಜನ್ಯದ ಕುರಿತು ಮಾತನಾಡುತ್ತಿರುವ ಮೂರು ಕಿರು ವೀಡಿಯೊಗಳು ಇಂಟರ್ನೆಟ್ ನಲ್ಲಿ ಹರೀದಾಡುತ್ತಿದೆ. ಸಂತ್ರಸ್ತೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕಾನೂನಿನ ತೊಡಕಿರುವುದರಿಂದ ಆ ವೀಡಿಯೊಗಳನ್ನು ತೋರಿಸುವುದು ಸೂಕ್ತವಲ್ಲ. ಆದರೆ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬ ಯೋಗಿ ಸರಕಾರದ ಅಧಿಕೃತ ಪ್ರತಿಪಾದನೆಯ ಹಿನ್ನೆಯಲ್ಲಿ ಅದರಲ್ಲಿನ ಮಾತುಕತೆಗಳು ಮಹತ್ವವನ್ನು ಪಡೆಯುತ್ತದೆ.

- Advertisement -

ಈ ವೀಡಿಯೊವನ್ನು ದಾಖಲಿಸಿದವರು ಯಾರು, ಯಾವಾಗ ಮತ್ತು ಹೇಗೆ ಎಂದು ತಿಳಿದಿಲ್ಲ. ಆದರೆ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು ಟ್ವಿಟ್ಟರ್ ನಲ್ಲಿ ಈ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಅಪರಾಧದ ದಿನ ಸಂತ್ರಸ್ತೆಯು ಅತ್ಯಾಚಾರದ ಕುರಿತು ಮಾತನಾಡಿಲ್ಲ ಎಂದು ಪ್ರತಿಪಾದಿಸುವುದಕ್ಕಾಗಿ ಅದನ್ನು ಪೋಸ್ಟ್ ಮಾಡಲಾಗಿತ್ತು. ಆದರೆ ಆಕೆಯ ಹೇಳಿಕೆಗಳನ್ನೊಳಗೊಂಡಿರುವ ಆಡಿಯೊದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿರುವುದನ್ನು ಆಕೆ ಹೇಳಿರುವುದು ಸ್ಪಷ್ಟವಾಗಿ ಕೇಳುತ್ತದೆ. ಈ ಕುರಿತು ‘ದಿ ವೈರ್’ ವರದಿಯೊಂದನ್ನು ಪ್ರಕಟಿಸಿದೆ. ನಂತರದ ದಿನದಲ್ಲಿ ಆಸ್ಪತ್ರೆ ವ್ಯವಸ್ಥೆಯೊಳಗೆ ಆಕೆ ಮಾತನಾಡಿದ ವೀಡಿಯೊ ಕೂಡ ಅಪರಾಧದ ಪ್ರಕೃತಿಯ ಕುರಿತು ಯಾವುದೇ ಅನುಮಾನವನ್ನು ಹುಟ್ಟುಹಾಕುವುದಿಲ್ಲ.

ಸೆಪ್ಟಂಬರ್ 22ರಂದು ಮ್ಯಾಜಿಸ್ಟ್ರೇಟ್ ಮುಂದೆ ಆಕೆ ಮಾಡಿದ ಸಾವಿನ ಘೋಷಣೆಯಲ್ಲೂ ತಾನು ಅತ್ಯಾಚಾರಕ್ಕೊಳಗಾಗಿರುವುದಾಗಿ ಹೇಳಿದ್ದಳು ಮತ್ತು ನಾಲ್ಕು ಪುರುಷರನ್ನು ದಾಳಿಕೋರರಾಗಿ ಗುರುತಿಸಿದ್ದಳು. ಆದರೆ ಸೆಪ್ಟಂಬರ್ 14ರಂದು ಮೊದಲು ಪೊಲೀಸ್ ಠಾಣೆಗೆ ಹೋದಾಗ ತಾನು ಅತ್ಯಾಚಾರಕ್ಕೊಳಗಾಗಿರುವ ಕುರಿತು ಆಕೆ ಹೇಳಿಲ್ಲ ಎನ್ನುವ ಮೂಲಕ ಪೊಲೀಸರು ಹೇಳಿಕೆಯನ್ನು ಕಡಿದಿದ್ದರು. ಸೆಪ್ಟಂಬರ್ 14ರಂದು ಚಂಡ್ಪ ಪೊಲೀಸ್ ಠಾಣೆ ಮತ್ತು ಸ್ಥಳೀಯ ಕ್ಲಿನಿಕ್ ವೊಂದರಲ್ಲಿ  ಚಿತ್ರೀಕರಿಸಲಾಗಿದೆಯೆಂದು ಹೇಳಲಾಗುವ ವೀಡಿಯೊ ಪೊಲೀಸರ ಹೇಳಿಕೆಗೆ ಸಂಪೂರ್ಣ ವ್ಯತಿರಿಕ್ತವಾಗಿದೆ.

- Advertisement -

ವೀಡಿಯೊವನ್ನು ಎಡಿಟ್ ಮಾಡಿ ಕಿರಿದಾಗಿಸಲಾಗಿದ್ದರೂ, ವೀಡಿಯೊದ ಸಂಪೂರ್ಣ ಮಾತುಕತೆ ಸ್ಪಷ್ಟವಾಗಿ ಅರ್ಥವಾಗದಿದ್ದರೂ ಸಂತ್ರಸ್ತೆ ಅತ್ಯಾಚಾರವಾದ ಕುರಿತು ಪೊಲೀಸ್ ಠಾಣೆ ಹಾಗೂ ಆಸ್ಪತ್ರೆಗಳಲ್ಲಿ ಮಾತನಾಡಿದ್ದಳೆಂಬ ವಾಸ್ತವವನ್ನು ವೀಡಿಯೊ ಸಾಬೀತುಪಡಿಸುತ್ತದೆ. ಆದಾಗ್ಯೂ ಸ್ಪಷ್ಟವಾಗಿ ಲೈಂಗಿಕ ಹಿಂಸೆ ಮಾಡಲಾಗಿರುವ ಪ್ರಕರಣದಲ್ಲಿ ಕಡ್ಡಾಯ ವಿಧಿವಿಜ್ನಾನ ಪರೀಕ್ಷೆಯನ್ನು  ಸೆಪ್ಟಂಬರ್ 22ರ ತನಕ ಪೊಲೀಸರು ನಡೆಸಲಿಲ್ಲ.ಅಪರಾಧ ನಡೆದು 8 ದಿನಗಳ ಬಳಿಕ ಸಾಕ್ಷ್ಯವು ದೊರೆಯುವ ಸಾಧ್ಯತೆಯು ಶೂನ್ಯವಿರುವಾಗ ಅದನ್ನು ನಡೆಸಲಾಯಿತು.

ತನಗೆ ಏನಾಯಿತೆಂದು ಯುವತಿ ವಿವರಿಸುವ ವೀಡಿಯೊ ಪ್ರತಿಲಿಪಿಯನ್ನು ಕೆಳಗೆ ನೀಡಲಾಗಿದೆ. ಕಾನೂನಿಗೆ ಅಧೀನರಾಗಿ ನಾವು ವೀಡಿಯೊವನ್ನು ಇಲ್ಲಿ ಪ್ರಕಟಿಸುವುದಿಲ್ಲ. .

ಮೊದಲ ವೀಡಿಯೊದ ಪ್ರತಿಲಿಪಿ:

ಇದು ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಳ್ವಿಯಾ ಹಂಚಿಕೊಂಡ ವೀಡಿಯೊ. ಝೀ ಟಿವಿ ಪ್ರಕಟಿಸಿದ ಮಸುಕಾಗಿಸಿದ ಇನ್ನೊಂದು ವೀಡಿಯೊದಲ್ಲಿ ಧರಿಸಿದ್ದ ಅದೇ ಉಡುಪನ್ನು ಈ ವೀಡಿಯೊದಲ್ಲೂ ಧರಿಸಿರುವುದು ಕಂಡುಬರುತ್ತದೆ. ಆ ವೀಡಿಯೊದಲ್ಲಿ ಆಕೆ ಪೊಲೀಸ್ ಠಾಣೆಯಲ್ಲಿ ನೆಲದಲ್ಲಿ ಮಲಗಿದ್ದಳು. ಆಗ ಪೊಲೀಸನು ಅಲ್ಲೇ ನಿಂತು ಬಹಳ ಸಾವಧಾನದಿಂದ ಆಕೆಯ  ಚಿತ್ರ ಹಿಡಿಯುತ್ತಿರುತ್ತಾನೆ. ಘಟನೆ ನಡೆದ ಕೂಡಲೇ ಆ ವೀಡಿಯೊವನ್ನು ಚಿತ್ರೀಕರಿಸಲಾಗಿತ್ತು. ಈ ವೀಡಿಯೊ ಎ.ಎಂ.ಯು ಆಸ್ಪತ್ರೆಯ ಹೊರಗೆ ಚಿತ್ರೀಕರಿಸಲಾಗಿರುವುದೆಂದು ಮಾಳ್ವಿಯಾ ಪ್ರತಿಪಾದಿಸಿದ್ದರು. ಆದರೆ ಎಲ್ಲಾ ಸಾಧ್ಯತೆಗಳ ಪ್ರಕಾರ ಆಕೆ ಇದ್ದ ಸಿಮೆಂಟ್ ನೆಲ ಮತ್ತು ದೇಹದ ಸ್ಥಿತಿಯನ್ನು ನೋಡುವಾಗ ಅದು ಚಿತ್ರೀಕರಿಸಲಾಗಿರುವುದು ಚಂಡ್ಪಾ ಪೊಲೀಸ್ ಠಾಣೆಯಲ್ಲಾಗಿತ್ತು. ಯುವತಿ ತೀವ್ರ ಒತ್ತಡದಲ್ಲಿದ್ದಳು. ಸ್ವಲ್ಪ ವಿಚಲಿತಳಾದಂತೆ ಭಾಸವಾಗುತ್ತಿತ್ತು. ದಾಳಿಯ ಸ್ವಲ್ಪವೇ ಸಮಯದಲ್ಲಿ ಚಿತ್ರೀಕರಿಸಲಾದ ವೀಡಿಯೊವೆಂದು ಅದನ್ನು ನೋಡುವಾಗ ಭಾಸವಾಗುತ್ತದೆ.

ಸಂತ್ರಸ್ತೆ: ಆತ ನನ್ನ ಕತ್ತು ಹಿಸುಕಿದ

ಸ್ಕ್ರೀನ್ ಮೇಲೆ ಕಾಣದ ಪುರುಷ ಧ್ವನಿ: ಯಾಕೆ?

ಸಂತ್ರಸ್ತೆ: (ನೋವಿನಲ್ಲಿ ನರಳುತ್ತಾಳೆ)

ಸ್ಕ್ರೀನ್ ಮೇಲೆ ಕಾಣದ ಪುರುಷ ಧ್ವನಿ: ಯಾಕೆ ಕತ್ತು ಹಿಸುಕಿದರು?

ಸಂತ್ರಸ್ತೆ: ಬಲಾತ್ಕರಿಸಲು (ಝಬರ್ದಸ್ತಿ) ನಾನು ಅವರನ್ನು ಬಿಡಲಿಲ್ಲ (ಬಲಾತ್ಕರಿಸಲು ಎಂಬುದು ಇಲ್ಲಿ ಅತ್ಯಾಚಾರಕ್ಕೆ ಬಳಸಿದ ಪದ)

ಸ್ಕ್ರೀನ್ ಮೇಲೆ ಕಾಣದ ಪುರುಷ ಧ್ವನಿ: ಯಾಕಾಗಿ ಕತ್ತು ಹಿಸುಕಿದರು ಹೇಳು.

ಸಂತ್ರಸ್ತೆ: (ಈ ಬಾರಿ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ) ಯಾಕೆಂದರೆ ನಾನು ಝಬರ್ದಸ್ತಿ (ಬಲಾತ್ಕಾರ) ಮಾಡಲು ಬಿಡಲಿಲ್ಲ.

ಸ್ಕ್ರೀನ್ ಮೇಲೆ ಕಾಣದ ಪುರುಷ ಧ್ವನಿ: ಸರಿ.

ಸ್ಕ್ರೀನ್ ಮೇಲೆ ಕಾಣದ ಪುರುಷ ಧ್ವನಿ: ಹೇಗೆ ಕತ್ತು ಹಿಸುಕಿದರು?

ಸ್ಕ್ರೀನ್ ಮೇಲೆ ಕಾಣದ ಇನ್ನೋರ್ವ ಪುರುಷ: ಹೇಗೆ ಕತ್ತು ಹಿಸುಕಿದರು ಹೇಳು.

ಸಂತ್ರಸ್ತೆ: ಕೈಯಲ್ಲಿ

ಸ್ಕ್ರೀನ್ ಮೇಲೆ ಕಾಣದ ಇನ್ನೋರ್ವ ಪುರುಷ: ನಿನಗೆ ಗಾಯವಾಗಿದೆಯೇ?

ಸಂತ್ರಸ್ತೆ: ಇಲ್ಲ ಕತ್ತಿನಲ್ಲಿ. ಆಕೆ ಗಂಟಲು/ಕತ್ತಿನ ಕುರಿತು ಹೇಳುತ್ತಾಳೆ (ಆಕೆಯ ಗಂಟಲು, ಕತ್ತಿನ ಸುತ್ತಮುತ್ತ ತೀವ್ರ ನೋವಿತ್ತು. ಆ ಜಾಗವನ್ನು ಆಕೆ ತೋರಿಸುತ್ತಿದ್ದಳು)

ಮಹಿಳೆಯ ಸ್ವರ (ಬಹುಶ: ಆಕೆಯ ತಾಯಿ): ನಿನ್ನ ನಾಲಗೆ ತೋರಿಸು.

ಸಂತ್ರಸ್ತೆ ಆಕೆಯ ನಾಲಗೆ ತೋರಿಸುತ್ತಾಳೆ.

ನಂತರ ಪುರುಷ ಆಗ ನಿನ್ನ ತಂದೆ ಎಲ್ಲಿದ್ದರೆಂದು ಕೇಳುತ್ತಾರೆ. ಅದಕ್ಕೆ ಆಕೆ ‘’ಪಾಪ ಮೇರೆ ಸಿಧಾಯಿ, ಸೀಧೆ ಮೇರೆ ರೋಜ್ ಕಾ ಕರ್ಮಾ ಹೈ” ಎನ್ನುತ್ತಾಳೆ.

ತಾಯಿ ಹೇಳುತ್ತಾಳೆ – ‘ರೋಜ್ ಹಿ ಆವತ್ ಹೈ…(ನಂತರ ಅಸ್ಪಷ್ಟತೆ)

ಆಗ ಸ್ಕ್ರೀನ್ ಮೇಲೆ ಕಾಣಿಸದ ಯಾರೋ ನೀನು ಎಲ್ಲಿದ್ದಿ ಎಂದು ತಾಯಿಯನ್ನು ಕೇಳುತ್ತಾರೆ. ಆಗ ಆಕೆ ತಾನು ಹತ್ತಿರದಲ್ಲೇ ಇದ್ದೆ ಎಂದು ಹೇಳುತ್ತಾಳೆ.

ಚಿತ್ರೀಕರಣ ಕೊನೆಗೊಳ್ಳುತ್ತದೆ.

2. ದ್ವಿತೀಯ ವೀಡಿಯೊದ ಪ್ರತಿಲಿಪಿ:

ಈ ವೀಡಿಯೊವನ್ನು ಬಿಜೆಪಿ ತಮಿಳುನಾಡಿನ ಐಟಿ ಮತ್ತು ಸಾಮಾಜಿಕ ಮಾಧ್ಯಮದ ಸಂಯೋಜಕ ಸಿ.ಟಿ.ನಿರ್ಮಲ್ ಕುಮಾರ್ ಟ್ವಿಟ್ಟರ್ ಮೇಲೆ ಹಂಚಿದ್ದರು. ಇಲ್ಲಿ ಆಕೆ ಮೊದಲ ವೀಡಿಯೊದಲ್ಲಿ ಧರಿಸಿದ್ದ ಉಡುಪನ್ನೇ ಧರಿಸಿದ್ದಳು. ಆದರೆ ಅದು ಪೊಲೀಸ್ ಠಾಣೆಯಲ್ಲಿ ಆಗಿರಲಿಲ್ಲ. ಯಾವುದೋ ವೈದ್ಯಕೀಯ ವ್ಯವಸ್ಥೆಯಲ್ಲಾಗಿತ್ತೆಂದು ತೋರುತ್ತದೆ.

ಸಂತ್ರಸ್ತೆ: ಸಂದೀಪ್ ಮಾಡಿರುವುದು.

ಸ್ಕ್ರೀನ್ ಮೇಲೆ ಕಾಣದ ವ್ಯಕ್ತಿಯ ಧ್ವನಿ: ಏನು?

ಸಂತ್ರಸ್ತೆ: ಸಂದೀಪ್ ಮಾಡಿದ

ಸ್ಕ್ರೀನ್ ಮೇಲೆ ಕಾಣದ ವ್ಯಕ್ತಿಯ ಧ್ವನಿ: ಯಾರು?

ಸಂತ್ರಸ್ತೆ: ಸಂದೀಪ್

ಸ್ಕ್ರೀನ್ ಮೇಲೆ ಕಾಣದ ವ್ಯಕ್ತಿಯ ಧ್ವನಿ: ಮುಂದಕ್ಕೆ?

ಸಂತ್ರಸ್ತೆ: ಅವನು ನನ್ನ ಕತ್ತು ಹಿಸುಕಿದ

ಸ್ಕ್ರೀನ್ ಮೇಲೆ ಕಾಣದ ವ್ಯಕ್ತಿಯ ಧ್ವನಿ: ಯಾಕಾಗಿ

ಸಂತ್ರಸ್ತೆ: ಏನೂ ಇಲ್ಲ. ನಾವು ಹುಲ್ಲು ತರುವುದಕ್ಕೆ ಹೋಗಿದ್ದೆವು.

ಸ್ಕ್ರೀನ್ ಮೇಲೆ ಕಾಣದ ವ್ಯಕ್ತಿಯ ಧ್ವನಿ: ಹಾಂ.

ಸಂತ್ರಸ್ತೆ: ನಂತರ ಒಳಗೆ – ಅಸ್ಪಷ್ಟ ಧ್ವನಿಗಳು.“ಬಖ್ರೆ ಕೆ ಪೇಟ್ ಕೆ ಪೀಚೆ’’ ಅಥವಾ ಬಖ್ರೆ ಕಿ ದೂದ್ ಕೆ ಜಗಹ್ ಪೆ’.ನಂತರ ಸ್ಪಷ್ಟವಾಗಿ – ನನನ್ನು ಕೊಂಡೊಯ್ದ ಕತ್ತು ಹಿಸುಕಿದ. ಅಸ್ಪಷ್ಟ ಶಬ್ದಗಳು. ನಂತರ ಮತ್ತೆ ಸ್ಪಷ್ಟತೆ- ಬಲಾತ್ಕಾರ ಮಾಡಲು ಪ್ರಯತ್ನಿಸುತ್ತಿದ್ದ. ನಾನು ನಿರಾಕರಿಸಿದೆ. ಅವರು ನನ್ನ ಕತ್ತು ಹಿಸುಕಿದ.

ಸ್ಕ್ರೀನ್ ಮೇಲೆ ಕಾಣದ ವ್ಯಕ್ತಿಯ ಧ್ವನಿ: ಏನಾದರೂ ಹಳೆಯ ದ್ವೇಷ ಇತ್ತೇ?

ಸಂತ್ರಸ್ತೆ: ಹೌದು

ಸ್ಕ್ರೀನ್ ಮೇಲೆ ಕಾಣದ ಮಹಿಳೆಯ ಧ್ವನಿ: (ಬಹುಶ: ಸಂತ್ರಸ್ತೆಯ ತಾಯಿ) ಅದು ಹಿಂದಿನಿಂದಲೂ ಇತ್ತು (ದ್ವೇಷದ ಕುರಿತು)

ಸಂತ್ರಸ್ತೆ: (ಅಸ್ಪಷ್ಟ ಪದಗಳು, ಬಹುಶ: ಹಣದ ಕುರಿತೇನೋ- ‘ಪೈಸೆ’ ಎಂಬ ಪದವು ಕೇಳಲು ಸಾಧ್ಯವಾಗುತ್ತದೆ)

ಸ್ಕ್ರೀನ್ ಮೇಲೆ ಕಾಣದ ವ್ಯಕ್ತಿಯ ಧ್ವನಿ: ನಿನ್ನ ಹೆಸರೇನು?

ಸಂತ್ರಸ್ತೆ: x

ಚಿತ್ರೀಕರಣ ಕೊನೆಗೊಳ್ಳುತ್ತದೆ.

3. ಮೂರನೆ ವೀಡಿಯೊ ಪ್ರತಿಲಿಪಿ:

ಈ ವೀಡಿಯೊವನ್ನು ಸ್ಪಷ್ಟವಾಗಿ ಆಸ್ಪತ್ರೆ ವ್ಯವಸ್ಥೆಯಲ್ಲಿ ಚಿತ್ರೀಕರಿಸಲಾಗಿತ್ತು. ಬಹುಶ: ಅಲೀಘಡ್ ನ ಜೆ.ಎನ್.ಎಂ.ಎಚ್ ಆಸ್ಪತ್ರೆಯಲ್ಲಿ. ಸಂತ್ರಸ್ತೆ ಒಂದು ರೀತಿಯ ಕೊರಳು ಪಟ್ಟಿಯನ್ನು ಧರಿಸಿದ್ದಳು ಮತ್ತು ಪಾರದರ್ಶಕ ಪ್ಲಾಸ್ಟಿಕ್ ವೆಂಟಿಲೇಟರ್ ತರದ್ದನ್ನು ಧರಿಸಿರುತ್ತಾಳೆ. ಈ ಚಿತ್ರೀಕರಣದ ದಿನಾಂಕ ತಿಳಿದಿಲ್ಲ.

ಸಂತ್ರಸ್ತೆ: ಅಸ್ಪಷ್ಟತೆ

ಸಂತ್ರಸ್ತೆ: ಮತ್ತೊಮ್ಮೆ.

ಪುರುಷ ಧ್ವನಿ: ಮತ್ತೊಮ್ಮೆ ಅತ್ಯಾಚಾರ ಮಾಡಲು ಅವರು ಪ್ರಯತ್ನಿಸಿದರೇ?

ಸಂತ್ರಸ್ತೆ: ಹೌದು. ಆ ಸಹೋದರರು.

ಪುರುಷ ಧ್ವನಿ: ಮುಂಚೆ?

ಸಂತ್ರಸ್ತೆ: ಹೌದು.

ಪುರುಷ ಧ್ವನಿ: ಸರಿ, ಹಿಂದೆಯೂ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದರು.

ಸಂತ್ರಸ್ತೆ: ಹಾಂ!

ಪುರುಷ ಧ್ವನಿ: ಆದರೆ ಏನಾಯಿತು?

ಸಂತ್ರಸ್ತೆ: ನಾನು ಅಲ್ಲಿಂದ ಓಡಿದೆ.

ಪುರುಷ ಧ್ವನಿ: ನೀನು ಓಡಿ ಹೋದೆಯಾ? ನಂತರ?

ಸಂತ್ರಸ್ತೆ: ನಂತರ ರವಿ ನನ್ನನ್ನು ನೋಡುತ್ತಾ “ಏನಾದರೂ ಆಗಿದೆಯಾ ಇಲ್ಲವಾ?” ಎಂದು ಕೇಳಿದ.

ಪುರುಷ ಧ್ವನಿ: ಏನಾದರೂ ನಡೆದಿತ್ತೇ?

ಸಂತ್ರಸ್ತೆ: “ಸಂದೀಪ್ ನನ್ನು ಕೇಳು… (‘ಸಂದೀಪ್ ನನ್ನು ಕೇಳು’ ರವಿ ಹೇಳಿರುವುದಾಗಿ ಉಲ್ಲೇಖಿಸಿ ಹೇಳುತ್ತಾಳೆ)

ಪುರುಷ ಧ್ವನಿ: ಸರಿ

ಸಂತ್ರಸ್ತೆ:”…. ಫೋನ್ ಕರ್ಕೆ” (ರವಿ ಹೇಳುವ ಮಾತನ್ನು ಉಲ್ಲೇಖಿಸುವುದನ್ನು ಮುಂದುವರಿಸುತ್ತಾಳೆ ‘’ಫೋನ್ ನಲ್ಲಿ ಅವನನ್ನು ಕೇಳು ” ಎನ್ನುತ್ತಿದ್ದ)

ಪುರುಷ ಧ್ವನಿ: ಸರಿ

ಸಂತ್ರಸ್ತೆ: ಹಾಂ!

ಪುರುಷ ಧ್ವನಿ: “ಏನಾದರೂ ಆಗಿದೆಯಾ” ಎಂದು ರವಿ ಕೇಳುತ್ತಿದ್ದ.

ಸಂತ್ರಸ್ತೆ: ಅವರೆಲ್ಲರೂ ಇದರಲ್ಲಿ ಒಟ್ಟಾಗಿದ್ದರು ಎಂದು ನನಗೆ ಆಗ ಅರ್ಥವಾಗಿತ್ತು.

ಪುರುಷ ಧ್ವನಿ: ಸರಿ.

ಸಂತ್ರಸ್ತೆ: ಹಾಂ

ಪುರುಷ ಧ್ವನಿ: ಅವರಿಬ್ಬರೂ ಅದರಲ್ಲಿದ್ದರು.

ಸಂತ್ರಸ್ತೆ: ಹಾಂ.

ಪುರುಷ ಧ್ವನಿ: ಆ ಸಮಯದಲ್ಲಿ ನೀನು ತಪ್ಪಿಸಿಕೊಂಡಿದ್ದೆ. ನಂತರ?

ಸಂತ್ರಸ್ತ: ನಂತರ ಆ ದಿನ ಆಗಿತ್ತು.

ಪುರುಷ ಧ್ವನಿ: (ಸೆಪ್ಟಂಬರ್ 14ಅನ್ನು ಉಲ್ಲೇಖಿಸುತ್ತಾ) ನಿನಗೆ ಗಾಯವಾದ ಆ ದಿನ ಅತ್ಯಾಚಾರವಾಗಿತ್ತು?

ಸಂತ್ರಸ್ತೆ: ಹೌದು

ಪುರುಷ ಧ್ವನಿ: ಇಬ್ಬರೇ ಮಾಡಿದ್ದರೇ ಅಥವಾ ಇತರ ಯಾರಾದರೂ ಇದ್ದರೇ?

ಸಂತ್ರಸ್ತೆ: ಅವರಿಬ್ಬರೇ ಇದ್ದರು. ಉಳಿದವರೆಲ್ಲಾ ಓಡಿ ಹೋಗಿದ್ದರು.

ಪುರುಷ ಧ್ವನಿ: ಸರಿ. ಬಾಕಿ ಉಳಿದವರು ಓಡಿ ಹೋಗಿದ್ದರು?

ಸಂತ್ರಸ್ತೆ: ನನ್ನ ತಾಯಿಯನ್ನು ಕಂಡು.

ಪುರುಷ ಧ್ವನಿ: ಅಂದರೆ ತಾಯಿಯನ್ನು ನೋಡಿ ಓಡಿ ಹೋದರು.

ಸಂತ್ರಸ್ತೆ: ಹಾಂ.

ಪುರುಷ ಧ್ವನಿ: ಅಂದರೆ ಆ ಸಮಯದಲ್ಲಿ ನಿನಗೆ ಪ್ರಜ್ನೆಯಿತ್ತು.

ಸಂತ್ರಸ್ತೆ: ಸ್ವಲ್ಪ ಪ್ರಜ್ನೆಯಿತ್ತು.

ಪುರುಷ ಧ್ವನಿ: ಸ್ವಲ್ಪ ಪ್ರಜ್ನೆಯಿತ್ತು.

ಸಂತ್ರಸ್ತೆ: ಹಾಂ

ಪುರುಷ ಧ್ವನಿ: ನಂತರ ಏನಾಯಿತು?

ಸಂತ್ರಸ್ತೆ: ನಂತರ ನನ್ನ ತಾಯಿ ನನ್ನ ಮುಖದ ಮೇಲೆ ನೀರು ಹಾಕಿದರು. ಮತ್ತು ನನಗೆ ಏನಾಯಿತೆಂದು ಕೇಳಲು ಪ್ರಾರಂಭಿಸಿದರು.

ಚಿತ್ರೀಕರಣವು ಕಡಿತಗೊಳ್ಳುತ್ತದೆ.

ಒಟ್ಟಿನಲ್ಲಿ ಸ್ವತ: ಬಿಜೆಪಿ ನಾಯಕರು ಪ್ರಕಟಿಸಿದ ಸಂತ್ರಸ್ತೆಯ ವೀಡಿಯೊಗಳು ತನ್ನ ಮೇಲೆ ಅತ್ಯಾಚಾರ ನಡೆದಿರುವುದನ್ನು ಸ್ಪಷ್ಟವಾಗಿ ಹೇಳಿರುವುದನ್ನು ಸ್ಪಷ್ಟ ಪಡಿಸುತ್ತದೆ. ಹುಡುಗಿಯ ಮೇಲೆ ಅತ್ಯಾಚಾರ ನಡೆದು 8 ದಿನಗಳ ಬಳಿಕ ಮಾದರಿಯನ್ನು ಸಂಗ್ರಹಿಸಿದ ಪೊಲೀಸರು ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುವ ಮೂಲಕ ಸಮಾಜದ ದುರ್ಬಲ ವರ್ಗದ ಹುಡುಗಿಯನ್ನು ಮತ್ತೆ ಮತ್ತೆ ಕೊಲ್ಲುತ್ತಿದೆ.

Join Whatsapp