ಸಿಪಿಎಂ ಕಾರ್ಯದರ್ಶಿ ಸ್ಥಾನಕ್ಕೆ ಕೊಡಿಯೇರಿ ಬಾಲಕೃಷ್ಣನ್ ರಾಜಿನಾಮೆ

Prasthutha|

ತಿರುವನಂತಪುರಂ : ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣವೊಂದರಲ್ಲಿ ಕಾನೂನು ಬಾಹಿರ ಚಟುವಟಿಕೆಗೆ ಹಣಕಾಸು ಒದಗಿಸಿದ ಆರೋಪದಲ್ಲಿ ತಮ್ಮ ಮಗ ಬಂಧನವಾದ ಬೆನ್ನಲ್ಲೇ, ಕೇರಳದ ಮಾಜಿ ಸಚಿವ, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ರಾಜೀನಾಮೆ ನೀಡಿದ್ದಾರೆ. ಕೇರಳ ಸಿಪಿಎಂನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಂತರದ ಎರಡನೇ ಪ್ರಭಾವಿ ಸ್ಥಾನದಲ್ಲಿರುವ ಬಾಲಕೃಷ್ಣನ್, ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ನಿಡಿದ್ದಾರೆ.

- Advertisement -

ಸಿಪಿಎಂ ನೇತೃತ್ವದ ಎಲ್ ಡಿಎಫ್ ಸಂಚಾಲಕ ಎ. ವಿಜಯರಾಘವನ್ ಅವರನ್ನು ಬಾಲಕೃಷ್ಣನ್ ಅವರ ಸ್ಥಾನಕ್ಕೆ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ.

ವೈದ್ಯಕೀಯ ಚಿಕಿತ್ಸೆ ಪಡೆಯುವ ಉದ್ದೇಶದಿಂದ ರಜೆ ಬೇಕೆಂದು ಬಾಲಕೃಷ್ಣನ್ ಕೋರಿದ್ದಾರೆ ಎಂದು ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಬಾಲಕೃಷ್ಣನ್ ಕ್ಯಾನ್ಸರ್ ಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದರು. ಆಗ ಅವರು ತಮ್ಮ ಸ್ಥಾನದಿಂದ ತೆರವುಗೊಂಡಿರಲಿಲ್ಲ. ಈ ಬಾರಿ ಎಷ್ಟು ಅವಧಿ ಅವರು ಪಕ್ಷದ ವ್ಯವಹಾರಗಳಿಂದ ದೂರವುಳಿಯಲಿದ್ದಾರೆ ಎಂಬುದು ತಿಳಿದಿಲ್ಲ.

- Advertisement -

ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣವೊಂದರಲ್ಲಿ ಕಾನೂನು ಬಾಹಿರ ಚಟುವಟಿಕೆಗೆ ಹಣ ಪೂರೈಕೆ ಮಾಡಿದ್ದ ಆರೋಪದಲ್ಲಿ ಬಾಲಕೃಷ್ಣನ್ ಅವರ ಮಗ ಬಿನೀಶ್ ಕೋಡಿಯೇರಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ನ.25ರ ವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಡಿಸೆಂಬರ್ ನಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗೂ ಮುನ್ನಾ ಬಾಲಕೃಷ್ಣನ್ ಅವರ ರಾಜೀನಾಮೆ, ಸಿಪಿಎಂ ಒಳಗೆ ಕಳವಳವನ್ನುಂಟು ಮಾಡಿದೆ.   

Join Whatsapp