ಫ್ರಾನ್ಸ್ ಅಧ್ಯಕ್ಷರನ್ನು ತೀವ್ರವಾಗಿ ಖಂಡಿಸಿದ ಖಬೀಬ್ ಇನ್ ಸ್ಟಾಗ್ರಂನಲ್ಲಿ ಪ್ರತಿಕ್ರಿಯಿಸಿದ್ದು ಹೇಗೆ?

Prasthutha|

ಮಾಸ್ಕೊ: ನಿವೃತ್ತ ಯು.ಎಫ್.ಸಿ ಕ್ರೀಡಾಪಟು ಖಬೀಬ್ ನುರ್ಮಗೊಮೊದೋವ್ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ರ ಇಸ್ಲಾಮ್ ವಿರೋಧಿ ಹೇಳಿಕೆಗೆ ತೀವ್ರವಾಗಿ ಖಂಡಿಸಿದ್ದಾರೆ. ವಿವಾದಾಸ್ಪದ ಇನ್ ಸ್ಟಾಗ್ರಂ ಪೋಸ್ಟ್ ಮೂಲಕ ಅವರು ಫ್ರಾನ್ಸ್ ಅಧ್ಯಕ್ಷರ ಮೇಲೆ ದಾಳಿ ನಡೆಸಿದ್ದಾರೆ.

- Advertisement -

ಇಮ್ಯಾನುಯಲ್ ಮಾಕ್ರನ್ ರ ಮುಖದಲ್ಲಿ ಬೂಟ್ ಪ್ರಿಂಟ್ ಇರುವ ಪೋಸ್ಟೊಂದನ್ನು ಪ್ರಕಟಿಸಿದ್ದು, ‘ಈ ಸೃಷ್ಟಿಯ ಮುಖವನ್ನು ಸರ್ವಶಕ್ತನು ವಿರೂಪಗೊಳಿಸಲಿ” ಎಂದು ಅವರು ಬರೆದಿದ್ದಾರೆ. ಅದರ ಜೊತೆಗೆ ರಶ್ಯಾ ಮತ್ತು ಅರೇಬಿಕ್ ಭಾಷೆಗಳ ಬರಹಗಳನ್ನು ಪೋಸ್ಟ್ ಮಾಡಿದ್ದಾರೆ.

“ಮಾತನಾಡುವ ಸ್ವಾತಂತ್ರ್ಯದ ಘೋಷಣೆಯ ನೆಪದಲ್ಲಿ ಒಂದೂವರೆ ಬಿಲಿಯನ್ ಗೂ ಅಧಿಕ ಮುಸ್ಲಿಮ್ ವಿಶ್ವಾಸಿಗಳ ನಂಬಿಕೆಯನ್ನು ಘಾಸಿಗೊಳಿಸುವ ಈ ಜೀವಿ ಮತ್ತ್ ಅದರ ಎಲ್ಲಾ ಅನುಯಾಯಿಗಳ ಮುಖವನ್ನು ಸರ್ವಶಕ್ತನು ವಿರೂಪಗೊಳಿಸಲಿ. ಈ ಜೀವನ ಮತ್ತು ಪರಲೋಕ ಜೀವನದಲ್ಲಿ ಅಲ್ಲಾಹನು ಅವರನ್ನು ಅವಮಾನಗೊಳಿಸಲಿ. ಅಲ್ಲಾಹನು ತನ್ನ ಲೆಕ್ಕಾಚಾರದಲ್ಲಿ ತ್ವರಿತನಾಗಿರುತ್ತಾನೆ ಮತ್ತು ನೀವು ಅದನ್ನು ಕಾಣಲಿದ್ದೀರಿ” ಎಂದು  ಅವರು ಬರೆದುಕೊಂಡಿದ್ದಾರೆ.

- Advertisement -

“ನಾವು ಮುಸ್ಲಿಮರು. ನಾವು ನಮ್ಮ ತಾಯಿ, ತಂದೆ, ಮಕ್ಕಳು, ಪತ್ನಿಯರು ಮತ್ತು ನಮ್ಮ ಹೃದಯಕ್ಕೆ ಹತ್ತಿರವಾದ ಎಲ್ಲಾ ಜನರಿಗಿಂತ ಹೆಚ್ಚಾಗಿ ಪ್ರವಾದಿ ಮುಹಮ್ಮದ್ ರನ್ನು ಪ್ರೀತಿಸುತ್ತೇವೆ. ನನ್ನನ್ನು ನಂಬಿರಿ, ಈ ಪ್ರಚೋದನೆಗಳು ಅವರಿಗೆ ಹಿಂದಿರುಗಲಿವೆ ಮತ್ತು ದೇವಭಯದೊಂದಿಗೆ ಅದು ಕೊನೆಗೊಳ್ಳಲಿದೆ” ಎಂದು ಅವರು ಬರೆದಿದ್ದಾರೆ.

ಖಬೀಬ್ 33:57 ಸೂಕ್ತವನ್ನು ಉಲ್ಲೇಖಿಸುತ್ತಾ, “ಖಂಡಿತವಾಗಿಯೂ ಅಲ್ಲಾಹು ಮತ್ತು ಅವರ ಸಂದೇಶವಾಹಕರನ್ನು ಅವಮಾನಿಸಲು ಯತ್ನಿಸುವವರನ್ನು ಅಲ್ಲಾಹನು ಈ ಲೋಕದಲ್ಲಿ ಶಪಿಸುವನು ಮತ್ತು ಪರಲೋಕದಲ್ಲಿ ಅವರಿಗಾಗಿ ಆಪಮಾನಾತ್ಮಕ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿರುವನು” ಎಂದು ಪೋಸ್ಟ್ ಮಾಡಿದ್ದಾರೆ.

Join Whatsapp