ಮತ ಎಣಿಕೆ ಇನ್ನೂ ಬಾಕಿಯಿದೆ | ಮತ ಗಳಿಕೆಯಲ್ಲಿ ಅಮೆರಿಕ ಇತಿಹಾಸದಲ್ಲೇ ಜೋ ಬೈಡನ್ ದಾಖಲೆ!

Prasthutha|

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಇನ್ನೂ ಪ್ರಗತಿಯಲ್ಲಿದ್ದರೂ, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋಯ್ ಬಿಡೆನ್ ಅಮೆರಿಕದ ಇತಿಹಾಸದಲ್ಲಿಯೇ ಯಾವುದೇ ಅಧ್ಯಕ್ಷೀಯ ಅಭ್ಯರ್ಥಿ ಪಡೆಯದಷ್ಟು ಮತಗಳನ್ನು ಪಡೆದು ದಾಖಲೆ ಬರೆದಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮರ ದಾಖಲೆಯನ್ನೂ ಮುರಿದು ಹೊಸ ದಾಖಲೆಯನ್ನು ಬೈಡನ್ ರೂಪಿಸಿದ್ದಾರೆ.

- Advertisement -

ಈಗಾಗಲೇ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಜೋ ಬೈಡನ್ ಈಗಾಗಲೇ 70.7 ದಶಲಕ್ಷ ಮತಗಳನ್ನು ಪಡೆದಿದ್ದಾರೆ. 2008ರಲ್ಲಿ ಒಬಾಮಾ 69 ದಶಲಕ್ಷ ಮತಗಳನ್ನು ಪಡೆದಿದ್ದರು. ಒಬಾಮಾ 2008ರಲ್ಲಿ ಪಡೆದ ಮತಗಳಿಗಿಂತ ಬೈಡನ್ ಈಗಾಗಲೇ 3 ಲಕ್ಷ ಹೆಚ್ಚು ಮತಗಳನ್ನು ಪಡೆದಿದ್ದಾರೆ.

ಇನ್ನೂ ಮತ ಎಣಿಕೆ ಮುಂದುವರೆದಿದ್ದು, ಬೈಡನ್ ಒಟ್ಟು ಮತಗಳ ಸಂಖ್ಯೆ ಇನ್ನೂ ಏರಿಕೆಯಾಗುವ ನಿರೀಕ್ಷೆಯಿದೆ. ಆ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಹೊಸ ದಾಖಲೆ ಬರೆಯಲಿದ್ದಾರೆ.

Join Whatsapp