November 17, 2020

ಭಯೋತ್ಪಾದಕ ಕೇಸ್ ನಲ್ಲಿ ಬಂಧಿತನಾಗಿದ್ದ ವ್ಯಕ್ತಿಗೆ ‘ಅಲ್ ಖೈದಾ’ ಜೊತೆ ಯಾವುದೇ ನಂಟಿಲ್ಲ

ರಾಂಚಿ : ಕಠಿಣ ಭಯೋತ್ಪಾದನಾ ತಡೆ ಕಾನೂನು ಯುಎಪಿಎಯಡಿ, ಅಲ್ ಖೈದಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಮೌಲಾನಾ ಕಲಿಮುದ್ದೀನ್ ಮುಝಾಹಿರ್ ಅವರಿಗೆ ಇತ್ತೀಚೆಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಸುಮಾರು 1 ವರ್ಷಕ್ಕಿಂತಲೂ ಹೆಚ್ಚು ಅವಧಿಯಲ್ಲಿ ಅವರು ಜೈಲಿನಲ್ಲಿದ್ದರು.
ಅಲ್ ಖೈದಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಬಗ್ಗೆ ಅರ್ಜಿದಾರರ ವಿರುದ್ಧ ಯಾವುದೇ ಸಾಕ್ಷ್ಯ ಸಂಗ್ರಹಿಸುವಲ್ಲಿ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ. ಅರ್ಜಿದಾರರಿಗೆ ಯಾವುದೇ ಸಂಘಟನೆಯಿಂದ ಹಣ ಸಂದಾಯವಾದ ಬಗ್ಗೆಯೂ ತನಿಖಾಧಿಕಾರಿಗಳು ಪತ್ತೆಹಚ್ಚಿಲ್ಲ ಎಂದು ನ್ಯಾ. ಕೈಲಾಶ್ ಪ್ರಸಾದ್ ದೇವೊ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ಟಾಪ್ ಸುದ್ದಿಗಳು