ಇಸ್ರೇಲ್ ಪ್ರಧಾನಿಯಿಂದ ಸೌದಿ ಅರೇಬಿಯಾಕ್ಕೆ ರಹಸ್ಯ ಭೇಟಿ, ರಾಜಕುಮಾರನೊಂದಿಗೆ ಮಾತುಕತೆ: ಇಸ್ರೇಲಿ ಮಾಧ್ಯಮ ವರದಿ

Prasthutha|

►► ಮೊಸಾದ್ ಮುಖ್ಯಸ್ಥನೂ ಮಾತುಕತೆಯಲ್ಲಿ ಭಾಗಿ

- Advertisement -

ಜೆರೂಸಲೇಂ: ಸೌದಿ ಅರೇಬಿಯಾಗೆ ಮೊದಲ ಬಾರಿ ಪ್ರವಾಸವನ್ನು ಕೈಗೊಂಡಿರುವ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ರೊಂದಿಗೆ ರಹಸ್ಯ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವಾರ ಇಸ್ರೇಲ್ ನಲ್ಲಿದ್ದ ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮೈಕ್ ಪಾಂಪಿಯೊ ಕೂಡ ಮಾತಕತೆಯಲ್ಲಿ ಭಾಗವಹಿಸಿದ್ದರು ಎಂದು ಇಸ್ರೇಲಿ ಸಾರ್ವಜನಿಕ ಪ್ರಸಾರ ಕಾರ್ಪೊರೇಶನ್ ‘ಕಾನ್’ ನ ರಾಜತಾಂತ್ರಿಕ ವರದಿಗಾರರೊಬ್ಬರು ಸೋಮವಾರ ಹೇಳಿರುವುದಾಗಿ ಎನ್.ಡಿ.ಟಿ.ವಿ ವರದಿ ಮಾಡಿದೆ.

- Advertisement -

ನೇತನ್ಯಾಹು ಮತ್ತು ಇಸ್ರೇಲ್ ಬೇಹುಗಾರಿಕಾ ಏಜೆನ್ಸಿ ಮೊಸಾದ್ ನ ಮುಖ್ಯಸ್ಥ ಯೊಸ್ಸಿ ಕೊಹೆನ್ ನಿನ್ನೆ ಸೌದಿ ಅರೇಬಿಯಾಕ್ಕೆ ಹಾರಿದ್ದು, ನಿಯೋಮ್ ನಲ್ಲಿ ಪಾಂಪ್ಯೊ ಮತ್ತು ಎಂಬಿಎಸ್ ರನ್ನು (ಮುಹಮ್ಮದ್ ಬಿನ್ ಸಲ್ಮಾನ್ ರನ್ನು ಉಲ್ಲೇಖಿಸುತ್ತಾ) ಭೇಟಿಯಾಗಿದ್ದಾರೆ ಎಂದು ಅನಾಮಧೇಯ ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮವು ವರದಿ ಮಾಡಿದೆ.

ಇತರ ಇಸ್ರೇಲಿ ಮಾಧ್ಯಮಗಳು ಕೂಡ ಇದನ್ನು ವರದಿ ಮಾಡಿವೆ. ನೇತನ್ಯಾಹು ಕಚೇರಿಯು ಈ ಕುರಿತು ಪ್ರತಿಕ್ರಿಯಿಸಿಲ್ಲ. ಈಗ ಆಡಳಿತದಿಂದ ಹೊರಹೋಗುತ್ತಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಾಳಿತ ಈ ಒಪ್ಪಂದಗಳಿಗೆ ಮಧ್ಯಸ್ತಿಕೆ ವಹಿಸಿತ್ತು.

Join Whatsapp