ಐಪಿಎಲ್ ಬೆಟ್ಟಿಂಗ್ ತಡೆ ದಳದಲ್ಲಿದ್ದ ಪೊಲೀಸ್ ಸಿಬ್ಬಂದಿಯಿಂದಲೇ ಬೆಟ್ಟಿಂಗ್ ವ್ಯವಹಾರ | ಬಂಧನ

Prasthutha|

ಬೆಂಗಳೂರು : ಐಪಿಎಲ್ ಕ್ರೀಡಾ ಕೂಟ ನಡೆಯುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಬೆಟ್ಟಿಂಗ್ ಮತ್ತು ಜೂಜು ದಂಧೆಯನ್ನು ತಡೆಯಲೆಂದು ನಿಯೋಜಿಸಲಾದ ಬೆಟ್ಟಿಂಗ್ ತಡೆ ದಳದಲ್ಲಿ ನಿಯೋಜಿತನಾಗಿದ್ದ ಪೊಲೀಸ್ ಸಿಬ್ಬಂದಿಯೇ ಬೆಟ್ಟಿಂಗ್ ವ್ಯವಹಾರದಲ್ಲಿ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. ಕಾನೂನು ಜಾರಿಗೊಳಿಸಬೇಕಾದ ಪೊಲೀಸ್ ಸಿಬ್ಬಂದಿ ಸ್ವತಹ ತಾನೇ ಚಿಕ್ಕಬಳ್ಳಾಪುರದಲ್ಲಿ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

- Advertisement -

ಜಿಲ್ಲಾ ಕ್ರೈಂ ಬ್ಯೂರೊ ಹೆಡ್ ಕಾನ್ಸ್ ಟೇಬಲ್, ಚಿಂತಾಮಣಿ ನಿವಾಸಿ ಮಂಜುನಾಥ್ ಎಂಬವರು ಈ ಸಂಬಂಧ ಬಂಧಿತರಾಗಿದ್ದಾರೆ.

ಬೆಟ್ಟಿಂಗ್ ವ್ಯವಹಾರಕ್ಕೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆತ ತನ್ನನ್ನು ಬಂಧಿಸುವುದಕ್ಕಿಂತ, ತಾಕತ್ತಿದ್ದರೆ ತನಗಿಂತಲೂ ದೊಡ್ಡ ವ್ಯವಹಾರ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ಬಂಧಿಸುವಂತೆ ಸವಾಲು ಹಾಕಿದ್ದ, ಹೀಗಾಗಿ ವಿಷಯ ಬೆಳಕಿಗೆ ಬಂದಿದ್ದು, ಆರೋಪಿ ಹೆಡ್ ಕಾನ್ಸ್ ಟೇಬಲ್ ಅನ್ನು ಕೂಡ ಬಂಧಿಸಲಾಗಿದೆ.

- Advertisement -

ಪ್ರಸ್ತುತ ಐಪಿಎಲ್ ನಡೆಯುತ್ತಿರುವುದರಿಂದ ಬೆಟ್ಟಿಂಗ್ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದು ಪೊಲೀಸರಿಗೆ ತಲೆನೋವನ್ನುಂಟು ಮಾಡಿದೆ.

Join Whatsapp