ಜೋ ಬೈಡನ್ ಪತ್ನಿಯ ಪಾಲಿಸಿ ಡೈರೆಕ್ಟರ್ ಆಗಿ ಭಾರತೀಯ ಮೂಲದ ಮಾಲಾ ಅಡಿಗ ನೇಮಕ

Prasthutha|

ವಾಷಿಂಗ್ಟನ್ : ಅಮೆರಿಕದ ಭಾವೀ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿ ಜಿಲ್ ಬೈಡನ್ ಅವರ ನೀತಿ ನಿರ್ದೇಶಕಿ (ಪಾಲಿಸಿ ಡೈರೆಕ್ಟರ್) ಆಗಿ ಭಾರತೀಯ ಮೂಲದ ಮಾಲಾ ಅಡಿಗ ಅವರನ್ನು ನೇಮಕ ಮಾಡಲಾಗಿದೆ. ಜೋ ಬೈಡನ್ ಅವರು ಈ ನೇಮಕಾತಿ ಮಾಡಿದ್ದಾರೆ.

- Advertisement -

ಅಡಿಗ ಅವರು ಜಿಲ್ ಬೈಡನ್ ಅವರಿಗೆ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು ಮತ್ತು ಬೈಡನ್ – ಕಮಲಾ ಹ್ಯಾರಿಸ್ ಪ್ರಚಾರದಲ್ಲಿ ಹಿರಿಯ ನೀತಿ ಸಲಹೆಗಾರರಾಗಿದ್ದರು. ಇದಕ್ಕೂ ಮೊದಲು ಅಡಿಗ ಅವರು ಬೈಡನ್ ಫೌಂಡೇಶನ್ ನಲ್ಲಿ ಉನ್ನತ ಶಿಕ್ಷಣ ಮತ್ತು ಸೇನಾ ಕುಟುಂಬಗಳ ನಿರ್ದೇಶಕಿಯಾಗಿದ್ದರು.

ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವಧಿಯಲ್ಲೂ ಮಾಲಾ ಅಡಿಗ ಹಲವು ಪ್ರತಿಷ್ಠಿಯ ಹುದ್ದೆಗಳನ್ನು ನಿರ್ವಹಿಸಿದ್ದರು.

- Advertisement -

ನ್ಯಾಯವಾದಿಯಾಗಿರುವ ಮಾಲಾ ಅಡಿಗ ಅಮೆರಿಕ ಸರಕಾರದಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡಿದ್ದವರು. 2008ರಲ್ಲಿ ಬರಾಕ್ ಒಬಾಮಾ ಪರ ಪ್ರಚಾರದಲ್ಲಿ ಸೇರಿಕೊಳ್ಳುವಾಗ, ಚಿಕಾಗೊ ಕಾನೂನು ಸಂಸ್ಥೆಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು.

Join Whatsapp