November 16, 2020

ದೋಣಿಯಲ್ಲಿ ನಿಂತು ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಮೂವರು ಹುಡುಗಿಯರು

ನಿಝಾಮಾಬಾದ್: ಅಲಿ ಸಾಗರ್ ಯೋಜನೆಗೆ ದೋಣಿ ಮೇಲೆ ಸಾಗುತ್ತಿದ್ದಾಗ ಸೆಲ್ಫಿ ತೆಗೆಯಲು ಪ್ರಯತ್ನಿಸಿ ನೀರಿಗೆ ಬಿದ್ದು ನಿಝಾಮಾಬಾದ್ ನ ಬುಧಾನ್ ಪಟ್ಟಣದ ಮೂವರು ಹುಡುಗಿಯರು ಸಾವನ್ನಪ್ಪಿದ್ದಾರೆ.

ಓರ್ವ ಹುಡುಗಿ ದೋಣಿಯಿಂದ ಬಿದ್ದಿದ್ದು, ಈ ವೇಳೆ ಇನ್ನಿಬ್ಬರು ಆಕೆಯನ್ನು ಬಚಾವು ಮಾಡಲು ಪ್ರಯತ್ನಿಸಿದ್ದು ಈ ವೇಳೆ ಮೂವರು ನೀರು ಪಾಲಾಗಿದ್ದಾರೆ. ಹುಡುಗಿಯರು ಈಜು ಬಲ್ಲವರಾಗಿರಲಿಲ್ಲ.




ಹುಡುಗಿಯರನ್ನು ಜುಬೇರಾ (16), ಮೀರಾಜ್ (14) ಮತ್ತು ಮಶ್ರಾ (12) ಎಂದು ಗುರುತಿಸಲಾಗಿದೆ. ಅವರಲ್ಲಿಬ್ಬರು ಹೈದರಾಬಾದ್ ನವರಾಗಿದ್ದು ಬುಧೌನ್ ಪಟ್ಟಣದ ರಕಾಸಿಪೇಟ್ ನಲ್ಲಿ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ ಕುಟುಂಬ ಅಲಿ ಸಾಗರ್ ಯೋಜನೆಗೆ ಪಿಕ್ ನಿಕ್ ಹೊರಟಿತ್ತು.

ಟಾಪ್ ಸುದ್ದಿಗಳು

ವಿಶೇಷ ವರದಿ