ಗಲ್ಫ್ ರಾಷ್ಟ್ರದ ಈ ದೇಶದಲ್ಲಿನ್ನು ಮಹಿಳೆಯರಿಗೂ ಪುರುಷರಷ್ಟೇ ಸಂಬಳ ! ಲಿಂಗತಾರತಮ್ಯ ರದ್ದು

Prasthutha|

ಉದ್ಯೋಗ ವೇತನದಲ್ಲಿನ ತಾರತಮ್ಯವನ್ನು ರದ್ದುಪಡಿಸಿದ ಸೌದಿ ಅರೇಬಿಯಾ, ಸ್ತ್ರೀ- ಪುರುಷ ಲಿಂಗ ತಾರತಮ್ಯವನ್ನು ಕೊನೆಗೊಳಿಸಿದೆ. ಉದ್ಯೋಗಿಗಳಲ್ಲಿ  ಒಂದೇ ಕೆಲಸಕ್ಕೆ ವಿಭಿನ್ನ ವೇತನ ನೀಡುವುದನ್ನು ನಿಷೇಧಿಸಲಾಗಿದೆ.. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಕ್ರಮ ಕೈಗೊಂಡಿದೆ. ಈ ಮಹತ್ವದ ಹೊಸ ಆದೇಶವು ದೇಶದಲ್ಲಿ ನೌಕರರ ವೇತನದಲ್ಲಿ ಲಿಂಗ ತಾರತಮ್ಯವಿಲ್ಲದೆ ಸಮಾನ ವೇತನವನ್ನು ಖಾತರಿಪಡಿಸುತ್ತದೆ

- Advertisement -

ಇದೀಗಾಗಲೇ ಈ ನಿಟ್ಟಿನಲ್ಲಿ ದೇಶದಾದ್ಯಂತ ಉದ್ಯೋಗದಾತರು ಮತ್ತು ಸಂಸ್ಥೆಗಳಿಗೆ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಸೂಚನೆಗಳನ್ನು ನೀಡಿದೆ. ಈ ಹೊಸ ಕಾನೂನು ಲೈಂಗಿಕತೆ, ಅಂಗವೈಕಲ್ಯ, ವಯಸ್ಸು, ಅಥವಾ ಯಾವುದೇ ರೀತಿಯ ಉದ್ಯೋಗದ ಆಧಾರದ ಮೇಲೆ ಕಾರ್ಮಿಕರ ನಡುವೆ ಉದ್ಯೋಗದಾತರು ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ.

Join Whatsapp