ಫ್ರೆಂಚ್ ಉತ್ಪಾದನೆಗಳ ಮೇಲಿನ ಬಹಿಷ್ಕಾರ ನಿಲ್ಲಿಸುವಂತೆ ಅರಬ್ಬರಿಗೆ ಫ್ರಾನ್ಸ್ ಕರೆ

Prasthutha|

ಫ್ರೆಂಚ್ ಉತ್ಪಾದನೆಗಳಿಗೆ ಮೇಲಿನ ಬಹಿಷ್ಕಾರವನ್ನು ನಿಲ್ಲಿಸುವಂತೆ ಅರಬ್ ರಾಷ್ಟ್ರಗಳಿಗೆ ಫ್ರಾನ್ಸ್ ಕರೆಕೊಟ್ಟಿದೆ. ಅದೇ ವೇಳೆ, ಇಸ್ಲಾಮಿಕ್ ಮೂಲಭೂತವಾದದ ವಿರುದ್ಧ ತಾನು ಮಂಡಿಯೂರುವುದಿಲ್ಲ ಎಂದು ಅವರು ಹೇಳಿದ್ದಾರೆ.

- Advertisement -

ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಇಸ್ಲಾಮಿಸ್ಟ್ ಗಳನ್ನು ಟೀಕಿಸಿದ ನಂತರ ಮತ್ತು ಪ್ರವಾದಿ ಮುಹಮ್ಮದ್ ರ ವ್ಯಂಗ್ಯ ಚಿತ್ರವನ್ನು ಪ್ರಕಟಿಸುವುದನ್ನು ಮುಂದುವರಿಸಲು ತೀರ್ಮಾನಿಸಿದ ಬಳಿಕ  ಫ್ರೆಂಚ್ ಉತ್ಪಾದನೆಗಳನ್ನು ಬಹಿಷ್ಕರಿಸುವಂತೆ ಅರಬ್ ಜಗತ್ತಿನಲ್ಲಿ ಒತ್ತಾಯ ಹೆಚ್ಚುತ್ತಿವೆ.  

ಕುವೈಟ್ ನ ಸರಕಾರೇತರ ಯೂನಿಯನ್ ಆಫ್ ಕನ್ಸ್ಯೂಮರ್ ಕೊಒಪರೇಟೀವ್ ಸೊಸೈಟಿಗಳು ಹಲವು ಫ್ರೆಂಚ್ ಉತ್ಪಾದನೆಗಳನ್ನು ಸ್ಟೋರ್ ಗಳಿಂದ ಹಿಂದೆಗೆದಿತ್ತು. ತಾನು ಭೇಟಿ ನೀಡಿದ ಹಲವು ಸಹಕಾರಿ ಸೊಸೈಟಿಗಳು ತಮ್ಮ ಕಪಾಟುಗಳಲ್ಲಿದ್ದ ಫ್ರೆಂಚ್ ಉತ್ಪನ್ನಗಳನ್ನು ಖಾಲಿ ಮಾಡಿವೆ ಎಂದು ರಾಯ್ಟರ್ಸ್ ವರದಿ ಮಾಡಿದೆ.

- Advertisement -

“ಎಲ್ಲಾ ಕನ್ಸ್ಯೂಮರ್ ಕೊಆಪರೇಟೀವ್ ಸೊಸೈಟಿಗಳಿಂದ ಫ್ರೆಂಚ್ ಉತ್ಪನ್ನಗಳನ್ನು ತೆರವುಗೊಳಿಸಲಾಗಿದೆ” ಎಂದು ಫಹದ್ ಅಲ್ ಕಿಶ್ತಿಯ ಯೂನಿಯನ್ ಮುಖ್ಯಸ್ಥ ಹೇಳಿದ್ದಾರೆ. ಪ್ರವಾದಿಯವರ ವಿರುದ್ಧ ಮಾಡಲಾಗುತ್ತಿರುವ ಅವಮಾನಗಳ ಪುನರಾವರ್ತನೆಗೆ ಪ್ರತಿಕ್ರಿಯೆಯಾಗಿ ಕುವೈಟ್ ಸರಕಾರದ ಹೊರತಾಗಿ ಸ್ವತಂತ್ರವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೋರ್ಡಾನ್ ಮತ್ತು ಕತಾರ್ ಗಳಲ್ಲೂ ಇಂತದ್ದೇ ಬಹಿಷ್ಕಾರದ ಕರೆಗಳನ್ನು ನೀಡಲಾಗಿದೆ.

Join Whatsapp