ಪೊಲೀಸ್ ಆಯುಕ್ತರ ವಿರುದ್ಧ ಬಂಡಾಯ ಪ್ರಚೋದಿಸಿದ ಆರೋಪ: ರಿಪಬ್ಲಿಕ್ ಟಿವಿ ವಿರುದ್ಧ ಇನ್ನೊಂದು ಎಫ್.ಐ.ಆರ್

Prasthutha|

ಮುಂಬೈ ಪೊಲೀಸರಲ್ಲಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ವಿರುದ್ಧ ಬಂಡಾಯವನ್ನು ಪ್ರೇರೇಪಿಸಿರುವ ಆರೋಪದ ಮೇಲೆ ಶುಕ್ರವಾರದಂದು ರಿಪಬ್ಲಿಕ್ ಟಿವಿ ಚಾನೆಲ್ ವಿರುದ್ಧ ಹೊಸ ಎಫ್.ಐ.ಆರ್ ವೊಂದನ್ನು ದಾಖಲಿಸಲಾಗಿದೆ. ಆಲ್ಲದೆ ಚಾನೆಲ್ ನ ಕಾರ್ಯನಿರ್ವಾಹಕ ಸಂಪಾದಕ, ನಿರೂಪಕ, ಇಬ್ಬರು ವರದಿಗಾರರು ಮತು ಇತರ ಸಂಪಾದಕೀಯ ಸಿಬ್ಬಂದಿಗಳ ವಿರುದ್ಧವೂ ಮುಂಬೈ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.

- Advertisement -

ಎನ್.ಎಂ.ಜೋಶಿ ಮಾರ್ಗ್ ಪೊಲೀಸ್ ಠಾಣೆಯ ಬೇಹುಗಾರಿಕಾ ವಿಭಾಗದ ವಿಶೇಷ ದಳ-1 ರಿಪಬ್ಲಿಕ್ ಟಿವಿ ವಿರುದ್ಧದ ನಾಲ್ಕನೆ ಎಫ್.ಐ.ಆರ್ ಅನ್ನು ದಾಖಲಿಸಿದೆ. ಮುಂಬೈ ಪೊಲೀಸ್ ನ ಸಾಮಾಜಿಕ ಮಾಧ್ಯಮ ಪ್ರಯೋಗಶಾಲೆಯಲ್ಲಿ ಕೆಲಸ ಮಾಡುವ ಸಬ್ ಇನ್ ಸ್ಪೆಕ್ಟರ್ ಶಶಿಕಾಂತ್ ಪವಾರ್ ಪ್ರಕ್ರರಣದಲ್ಲಿ ದೂರುದಾರನಾಗಿದ್ದಾರೆ.

ಮುಂಬೈಯಲ್ಲಿ ಅಶಾಂತಿ ಅಥವಾ ಕೋಮುಗಲಭೆಯನ್ನು ಸೃಷ್ಟಿಸಬಹುದಾದ ಸಾಮಾಜಿಕ ಮಾಧ್ಯಮಗಳು ಮತ್ತು ದೂರದರ್ಶನಗಳ ಪೋಸ್ಟ್ ಗಳು, ಸುಳ್ಳು ಸುದ್ದಿಗಳು, ವದಂತಿ ಮತ್ತು ಇತರ ಬರಹಗಳ ಮೇಲೆ ಸೋಶಿಯಲ್ ಮೀಡಿಯಾ ಪ್ರಯೋಗಶಾಲೆಯು ಕಣ್ಣಿಟ್ಟಿರುತ್ತದೆ.

- Advertisement -

ರಿಪಬ್ಲಿಕ್ ಟಿವಿಯ “ಬಿಗ್ಗೆಸ್ಟ್ ಸ್ಟೋರಿ ಟುನೈಟ್” ವಿಭಾಗದಲ್ಲಿ “ಪರಮ್ ಬೀರ್ ಸಿಂಗ್ ವಿರುದ್ಧ ಬಂಡಾಯ? ಹಿರಿಯ ಅಧಿಕಾರಿ ತನಿಖೆಯ ಅಧಿಕಾರಿಯಾಗಿರುವುದು ವಿವರಗಳನ್ನು ನೀಡುತ್ತಿದೆ” ಎಂಬ ಶೀರ್ಷಿಕೆ ಕಂಡುಬಂದಿತ್ತು. ಅದೇ ರೀತಿಯಲ್ಲಿ, ಅಕ್ಟೋಬರ್ 22ರಂದು ರಿಪಬ್ಲಿಕ್ ಟಿವಿ ವೆಬ್ ಸೈಟ್ “”ಪರಮ್ ಬೀರ್ ಸಿಂಗ್ ವಿರುದ್ಧ ಮುಂಬೈ ಪೊಲೀಸ್ ನೊಳಗೆ ಬಂಡಾಯ ಸಿದ್ಧತೆ: ಮಾತಿನ ಪೆಟ್ಟು ಕೊಟ್ಟ ಅಧಿಕಾರಿಗಳು” ಎಂಬ ಶೀರ್ಷಿಕೆಯೊಂದಿಗೆ ಸ್ಟೋರಿಯೊಂದನ್ನು ಪ್ರಕಟಿಸಿತ್ತು.

“ಸಿಂಗ್ ಪೊಲೀಸ್ ಪಡೆಯ ವಿಶ್ವಾಸಾರ್ಹತೆಯನ್ನು ನಾಶಪಡಿಸುತ್ತಿದ್ದಾರೆ ಮತ್ತು ಟಿಆರ್ ಪಿ ಹಗರಣದಲ್ಲಿ ಪೊಲೀಸರು ಮುಖ್ಯಸ್ಥನ ಅಜೆಂಡಾವನ್ನು ಅನುಸರಿಸುತ್ತಿದ್ದಾರೆ ಎಂಬುದಾಗಿ ಮುಂಬೈ ಪೊಲೀಸ್ ನ ಹಿರಿಯ ಅಧಿಕಾರಿಯೊಬ್ಬರು ಒಪ್ಪಿಕೊಂಡಿರುವುದಾಗಿ ವರದಿ ಉಲ್ಲೇಖಿಸಿತ್ತು. ಅಕ್ಟೋಬರ್ 10ರಂದು ಈ ವರದಿಯನ್ನು ದೂರದರ್ಶನದಲ್ಲಿ ಪ್ರಸಾರಮಾಡಲಾಗಿತ್ತು. ಸಿಂಗ್ ಮುಂಬೈ ಪೊಲೀಸ್ ನ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಮತ್ತು ಅವರ ಆದೇಶಗಳು ಕಿರಿಯ ಅಧಿಕಾರಿಗಳಿಗೆ ಸ್ವೀಕಾರಾರ್ಹವಾಗಿಲ್ಲ ಎಂಬುದಾಗಿ ವರದಿಯಲ್ಲಿ ಹೇಳಲಾಗಿತ್ತೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.

Join Whatsapp