ಫೇಸ್ಬುಕ್ ‘Couple Challenge’ | ಎಚ್ಚರ ತಪ್ಪಿದೀರಾ ಜೋಕೆ । ಪುಣೆ ಪೊಲೀಸ್

Prasthutha|

ಸಾಮಾಜಿಕ ಮಾಧ್ಯಮದಲ್ಲಿ ‘ದಂಪತಿ ಸವಾಲು’ (Couple Challenge) ಗಾಗಿ ತಮ್ಮ ಸಂಗಾತಿಗಳೊಂದಿಗಿನ ಚಿತ್ರಗಳನ್ನು ಪೋಸ್ಟ್ ಮಾಡುವಾಗ ನೆಟಿಝನ್‌ಗಳು ಜಾಗರೂಕರಾಗಿರಬೇಕು ಎಂದು ಪುಣೆ ನಗರ ಪೊಲೀಸರು ಕೋರಿದ್ದಾರೆ, ಚಿತ್ರಗಳನ್ನು “ದುರುಪಯೋಗಪಡಿಸಿಕೊಳ್ಳಬಹುದು” ಎಂದು ಎಚ್ಚರಿಸಿದ್ದಾರೆ.

- Advertisement -

Couple Challenge ನ ಅಂಗವಾಗಿ ಹಲವಾರು ವಿವಾಹಿತ ದಂಪತಿಗಳು ತಮ್ಮ ಛಾಯಾಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ, ಪುಣೆ ಪೊಲೀಸರು ಸಂದೇಶವನ್ನು ಪೋಸ್ಟ್ ಮಾಡಿದ್ದು, “ನಿಮ್ಮ ಸಂಗಾತಿಯೊಂದಿಗೆ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸಿ. ನೀವು ಎಚ್ಚರಿಕೆ ವಹಿಸದಿದ್ದರೆ ಈ ‘ಮುದ್ದಾದ’ ಸವಾಲು ಮುಂದೆ ನಿಮ್ಮನ್ನು ದುಃಖಿಸುವಂತೆ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.

Couple Challenge ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ನೀವು ಅಪ್ಲೋಡ್ ಮಾಡಿದ ಚಿತ್ರಗಳನ್ನು ಮಾರ್ಫಿಂಗ್, ಸೇಡು ತೀರಿಸಲು, ಅಶ್ಲೀಲತೆಗಾಗಿ, ನಕಲಿತನ, ಇತ್ಯಾದಿಗಳಿಗೆ ಸಂಬಂಧಿಸಿದ ಸೈಬರ್ ಅಪರಾಧಗಳಿಗೆ ದುರುಪಯೋಗಪಡಿಸಿಕೊಳ್ಳಬಹುದು ”ಎಂದು ನಗರ ಪೊಲೀಸರು ಟ್ವೀಟ್ ಮಾಡಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ

- Advertisement -

ಕೆಲವರ ಫೋಟೋಗಳನ್ನು ಬಳಸಿಕೊಂಡು ಅದನ್ನು ಅವರ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡದ್ದರಿಂದ ಕಿರುಕುಳ ಅನುಭವಿಸಿದ ಹಲವು ಜನರಿಂದ ನಾವು  ದೂರುಗಳನ್ನು ಸ್ವೀಕರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವೈಯುಕ್ತಿಕ ಧ್ವೇಷ ಸಾಧನೆ  ಅಥವಾ ಪ್ರೇಮ ವೈಫಲ್ಯದಂತಹಾ ಪ್ರಕರಣಗಳಲ್ಲಿ ದುರುಳರು ಇಂತಹಾ ಫೋಟೋಗಳನ್ನು ವಿರೂಪಗೊಳಿಸಿ ನಂತರ ಅವುಗಳನ್ನು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಪೊಲೀಸರು ಕೆಲವೊಂದು ಘಟನೆಗಳ ಕುರಿತು ಹೇಳಿದ್ದಾರೆ. ಜನರು ತಮ್ಮ ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೊದಲು ಜಾಗರೂಕರಾಗಿರಬೇಕು ಎಂದು ಸೈಬರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜಯರಾಮ್ ಪೈಗುಡೆ ಮಾಧ್ಯಮಗಳಿಗೆ ತಿಳಿಸಿದರು.

Join Whatsapp