November 17, 2020

ರಾಜ್ಯಸಭಾ ಉಪಚುನಾವಣೆ | ಬಿಜೆಪಿ ಅಭ್ಯರ್ಥಿಯಾಗಿ ಡಾ ಕೆ. ನಾರಾಯಣ ಆಯ್ಕೆ

ಬೆಂಗಳೂರು : ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಡಾ. ಕೆ. ನಾರಾಯಣ ಆಯ್ಕೆಯಾಗಿದ್ದಾರೆ. ಡಿ.1ರಂದು ಈ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

ಈ ಕುರಿತು ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಡಾ.ಕೆ.ನಾರಾಯಣ (ಸ್ಪ್ಯಾನ್ ಪ್ರಿಂಟ್) ಅವರಿಗೆ ಹ್ರತ್ಪೂರ್ವಕ ಅಭಿನಂದನೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ಮೂಲದ ನಾರಾಯಣ್, ದೇವಾಂಗ ಸಮುದಾಯದವರಾಗಿದ್ದು, ಮುದ್ರಣ ಉದ್ಯಮಿಯಾಗಿದ್ದಾರೆ. ಸ್ಪ್ಯಾನ್ ಪ್ರಿಂಟ್ ಎಂಬ ಮುದ್ರಣ ಸಂಸ್ಥೆ ಹೊಂದಿದ್ದು, ಬಿಜೆಪಿ ಮತ್ತು ಅದರ ಸಹ ಸಂಘಟನೆಗಳ ಕರಪತ್ರವನ್ನು ಮುದ್ರಿಸಿಕೊಡುತ್ತಿದ್ದರು.

ಟಾಪ್ ಸುದ್ದಿಗಳು

ವಿಶೇಷ ವರದಿ