ತನಿಶ್ಕ್ ಜಾಹೀರಾತು ಪ್ರಕರಣ: ಬೆದರಿಸುವ ವರ್ತನೆಯ ವಿರುದ್ಧ ಕ್ರಮಕ್ಕೆ ಅಂತಾರಾಷ್ಟ್ರೀಯ ಜಾಹಿರಾತು ಅಸೋಸಿಯೇಶನ್ ಆಗ್ರಹ

Prasthutha|

ಹಿಂದೂ-ಮುಸ್ಲಿಂ ಕುಟುಂಬವೊಂದು ಸೀಮಂತಕ್ಕೆ ಸಿದ್ಧಗೊಳ್ಳುವ ಜಾಹೀರಾತಿಗೆ ಸಂಬಂಧಿಸಿದಂತೆ ತನಿಶ್ಕ್ ಆಭರಣ ಬ್ರಾಂಡನ್ನು ಗುರಿಪಡಿಸಲಾಗಿರುವುದನ್ನು  ಭಾರತದ ಎರಡು ಪ್ರಮುಖ ಜಾಹೀರಾತು ಮಂಡಳಿಗಳು ಖಂಡಿಸಿವೆ.

- Advertisement -

ಮಂಗಳವಾರದಂದು ಸಾಮಾಜಿಕ ಜಾಲತಾಣಗಳಲ್ಲಿ ಹಿಂದುತ್ವ ಬೆಂಬಲಿಗರಿಂದ ತೀವ್ರ ಟೀಕೆಗೆ ಗುರಿಯಾದ ಬಳಿಕ ಜಾಹೀರಾತನ್ನು ಹಿಂದೆಗೆಯಲಾಗಿತ್ತು.

ಜಾಹೀರಾತಿನ ಹಿಂದೆಗೆಯುವಿಕೆಗೆ ಸಂಬಂಧಿಸಿದ ಘಟನೆಗಳನ್ನು “ಅತ್ಯಂತ ದುರದೃಷ್ಟ” ಎಂದು ಅಂತಾರಾಷ್ಟ್ರೀಯ ಜಾಹಿರಾತು ಅಸೋಸಿಯೇಶನ್ ನ ಭಾರತೀಯ ಘಟಕ ಹೇಳಿದೆ. ನರೇಂದ್ರ ಮೋದಿ ಸರಕಾರ ಇಂತಹ ‘ಬೆದರಿಸುವ ವರ್ತನೆ’ಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಸೋಸಿಯೇಶನ್ ಆಗ್ರಹಿಸಿದೆ.

- Advertisement -

ಜಾಹೀರಾತು ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಧರ್ಮವನ್ನು ಮತ್ತು ರಾಷ್ಟ್ರೀಯ ಭಾವನೆಯನ್ನು ನಿಂದಿಸುವಂತಿರಲಿಲ್ಲ” ಎಂದು ಅಡ್ವರ್ಟೈಸ್ ಮೆಂಟ್ ಕ್ಲಬ್ ಬುಧವಾರದಂದು ಬಿಡುಗಡೆಗೊಳಿಸಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ. “ಸೃಜನಾತ್ಮಕ ಅಭಿವ್ಯಕ್ತಿಯೊಂದರ ಮೇಲೆ ಈ ರೀತಿಯ ದಾಳಿಯು ಆಧಾರ ರಹಿತ ಮತ್ತು ಅಸಂಬದ್ಧ” ಎಂದು ಹೇಳಿಕೆ ತಿಳಿಸಿದೆ.

Join Whatsapp