ಅಣ್ಣಾಮಲೈ ವಿರುದ್ಧ ತಮಿಳುನಾಡಿನಲ್ಲಿ ಪ್ರಕರಣ ದಾಖಲು !

Prasthutha|

►ಬಿಜೆಪಿ ಸೇರಿದ ಮರುದಿನವೇ ಮಾಜಿ ಐಪಿಎಸ್ ಅಧಿಕಾರಿಯಿಂದ ಕಾನೂನು ಉಲ್ಲಂಘನೆ

- Advertisement -

ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ  ಅಣ್ಣಾಮಲೈ ವಿರುದ್ಧ ಕೊಯಂಬತ್ತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾನೂನು ಬಾಹಿರವಾಗಿ ಸಭೆ ನಡೆಸಿದ ಆರೋಪ ಅಣ್ಣಾಮಲೈ ಹಾಗೂ ಪಕ್ಷದ ಇತರ ಕಾರ್ಯಕರ್ತರ ವಿರುದ್ಧ ಹೊರಿಸಲಾಗಿದೆ.

ಕೊಯಂಬತ್ತೂರಿನ ವಿಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿ ಕಛೇರಿಯಲ್ಲಿ ಕೊರೋನಾ ನಿಯಮಗಳನ್ನು ಉಲ್ಲಂಘಿಸಿ ಅಣ್ಣಾಮಲೈ ಹಾಗೂ ಸಂಗಡಿಗರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದು, ಸರ್ಕಾರಿ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದ್ದರು.  ಇದಿಷ್ಟು ಸಾಲದೆಂಬಂತೆ ಅಣ್ಣಾಮಲೈ ಅವರು ವಾಹನವೊಂದರ ಮೇಲೆ ನಿಂತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಕಾರ್ಯಕರ್ತರು ಅಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

- Advertisement -

ಸಬ್ ಇನ್ಸ್’ಪೆಕ್ಟರ್ ಸುಗಣ್ಯಾ ನೀಡಿದ ದೂರಿನ ಆಧಾರದ ಮೇಲೆ  ಕತ್ತೂರು ಪೊಲೀಸರು ಅಣ್ಣಾಮಲೈ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ನಂದಕುಮಾರ್, ಬಿಜೆಪಿ ರಾಜ್ಯ ಮಟ್ಟದ ನಾಯಕರಾದ ಜಿಕೆಎಸ್ ಸೆಲ್ವಕುಮಾರ್, ಎಸ್.ಆರ್.ಸೇಕರ್ ಮತ್ತು ಕನಗಸಬಪತಿ ಮತ್ತು ಇತರ ಕೆಲವು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  ಇವರೆಲ್ಲರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143, 269, 270, 285, 341 ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 3ರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Join Whatsapp